ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬಿಜೆಪಿ ದುರಾಡಳಿತದಿಂದ ಜನ ಬೇಸತ್ತಿದ್ದಾರೆ; ಕುಮಾರಸ್ವಾಮಿ

ಮೈಸೂರು: ವೋಟರ್ ಐಡಿ ಪರಿಷ್ಕರಣೆ ಹೆಸರಲ್ಲಿ ಅಧಿಕಾರಿಗಳಿಂದಲೇ ಅಕ್ರಮ ನಡೆಯುತ್ತಿದೆ. ಸರ್ಕಾರಿ ಅಧಿಕಾರಿಗಳು ಎಂದು ಮನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ಸರ್ಕಾರದ ನಡವಳಿಕೆಯಿಂದ ಎಲ್ಲರೂ ಸಂಶಯಪಡುವಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ,.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ರಾಜ್ಯದ ಜನತೆ ಬಿಜೆಪಿ ದುರಾಡಳಿತದಿಂದ ಬೇಸತ್ತಿದ್ದಾರೆ. ಈ ಬಾರಿ ಬಿಜೆಪಿ ಏನೇ ಮಾಡಿದರೂ ಅಧಿಕಾರಕ್ಕೆ ಬರಲ್ಲ. ಕುತಂತ್ರದಿಂದ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಹೇಳಿದರು.

ಗುಂಬಜ್ ಮಾದರಿಯ ಶೆಲ್ಟರ್ ನಿರ್ಮಾಣ ವಿವಾದ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ಶಾಸಕರೇ ಕಣ್ಣೀರು ಹಾಕುತ್ತಿದ್ದಾರೆ ಎಂದ ಮೇಲೆ ಜನರ ಗತಿಯೇನು? ಸ್ವಪಕ್ಷದ ಸಂಸದರೇ ಶಾಸಕರಿಗೆ ಕಿರುಕುಳ ನೀಡುತ್ತಿದ್ದಾರೆ ಇನ್ನು ಅವರಿಗೆ ಮತ ಹಾಕಿದ ಮತದಾರರ ಗತಿ ಏನಾಗಬೇಕು ಎಂದು ಕಿಡಿಕಾರಿದರು.

ಇಂದಿನಿಂದ ಪಂಚರತ್ನ ಯಾತ್ರೆ ನಡೆಯಲಿದೆ. ಇಂದಿನಿಂದ 36 ದಿನಗಳ ಕಾಲ ಮೊದಲ ಹಂತದ ಪಂಚರತ್ನ ರಥ ಯಾತ್ರೆ ನಡೆಯಲಿದೆ. ಮಳೆಯಿಂದಾಗಿ ಪಂಚರತ್ನ ರಥ ಯಾತ್ರೆ ಮುಂದೂಡಲಾಗಿತ್ತು. ಇಂದಿನಿಂದ ಆರಂಭವಾಗಲಿದೆ ಎಂದರು.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.