ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಮಹಾರಾಷ್ಟ್ರದ 5 ಜಿಲ್ಲೆ ಸೇರಿಸಿ ಹೊಸ ನಕ್ಷೆ ಬಿಡುಗಡೆ ಮಾಡಿದ ಮಹಾರಾಷ್ಟ್ರ ಕನ್ನಡಿಗರು 

ಚಿಕ್ಕೋಡಿ : ಗಡಿ ವಿಚಾರದಲ್ಲಿ ಸದಾ ಕ್ಯಾತೆ ತೆಗೆಯುವ ಮಹಾ ಸರ್ಕಾರಕ್ಕೆ ಅಲ್ಲಿನ ಕನ್ನಡಿಗರು ಶಾಕ್ ನೀಡಿದ್ದು, ಕರ್ನಾಟಕದ ಜೊತೆಗೆ ಮಹಾರಾಷ್ಟ್ರದ ಐದು ಜಿಲ್ಲೆಗಳನ್ನು ಸೇರಿಸಿ ವಿಲೀನ ನಕ್ಷೆಯನ್ನು ಮಹಾರಾಷ್ಟ್ರ ಕನ್ನಡಿಗರು ಹಂಚಿಕೊಂಡಿದ್ದಾರೆ.

ಮಹಾರಾಷ್ಟ್ರದ ಜತ್ತನಲ್ಲಿರುವ ಕನ್ನಡಿಗರು ಕರ್ನಾಟಕಕ್ಕೆ ಹೊಸ ನಕ್ಷೆ ತಯಾರಿ ಮಾಡಿ ಬಿಡುಗಡೆ ಮಾಡಿದ್ಧಾರೆ. ಸದ್ಯ ಈಗಿರುವ ನಕ್ಷೆಗೆ ಮಹಾರಾಷ್ಟ್ರದ ಕೆಲವು ಜಿಲ್ಲೆಗಳನ್ನೇ ಸೇರಿಸಿ ಹೊಸ ನಕ್ಷೆ ತಯಾರಿ ಮಾಡಿದ್ದಾರೆ.

ಸದ್ಯ, ಈ ನಕ್ಷೆ ಗಡಿ ಭಾಗದಲ್ಲಿ ವೈರಲ್ ಆಗುತ್ತಿದೆ. ಈ ನಕ್ಷೆಯಲ್ಲಿ ಕರ್ನಾಟಕಕ್ಕೆ ಸೋಲಾಪುರ, ಉಸ್ಮನಾಬಾದ್, ಲಾತೂರು, ಸಾಂಗಲಿ ಹಾಗೂ ಕೊಲ್ಹಾಪುರ ಜಿಲ್ಲೆಗಳನ್ನು ಸೇರಿಸಿದ್ದಾರೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.