LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News

ಶೋಕ ಸಾಗರದ ಮಧ್ಯೆ ಸಚಿವ ಉಮೇಶ ಕತ್ತಿ ಅಂತ್ಯಕ್ರಿಯೆ

ಬೆಳಗಾವಿ : ಮಂಗಳವಾರ ತಡರಾತ್ರಿ ಬೆಂಗಳೂರಿನಲ್ಲಿ ಹೃದಯಾಘಾತದಿಂದ ಮೃತ ಪಟ್ಟ ಹಿರಿಯ ಸಚಿವ ಉಮೇಶ ಕತ್ತಿಯವರ ಅಂತ್ಯ ಸಂಸ್ಕಾರವು ಬೆಲ್ಲದ ಬಾಗೇವಾಡಿಯಲ್ಲಿನ ಅವರ ತೋಟದಲ್ಲಿ ಲಿಂಗಾಯತ ಪದ್ಧತಿಯಂತೆ ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ಮಾಡಲಾಯಿತು.



ಅನೇಕ ಲಿಂಗಾಯತ ಮಾಠಾಧಿಶರು ಅಂತಿಮ ವಿಧಿ ವಿಧಾನಗಳನ್ನು ವಚನಗಳ ಪಠನದೊಂದಿಗೆ ನೆರವೇರಿಸಿದರು.



ಅಂತ್ಯಸಂಸ್ಕಾರದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ,  ಹಿರಿಯ ಬಿಜೆಪಿ ನಾಯಕ ಯಡಿಯೂರಪ್ಪ ಸೇರಿದಂತೆ ರಾಜ್ಯದ ಬಹುತೇಕ ಸಚಿವರು, ಶಾಸಕರು ಸೇರಿದಂತೆ ರಾಜ್ಯದ ಎಲ್ಲ ಘಟಾನುಘಟಿ ನಾಯಕರು, ಕತ್ತಿ ಕುಟುಂಬದ ಸದಸ್ಯರು, ಸಂಬಂಧಿಕರು, ಸಾವಿರಾರು ಜನರು ಸಂಸ್ಕಾರದಲ್ಲಿ ಉಪಸ್ಥಿತರಿದ್ದರು.



ಶವ ಸಂಸ್ಕಾರಕ್ಕೆ ಎರಡು ಅಡಿಗಳಷ್ಟು ಕುಣಿ ತೋಡಿದಾಗ ನೆಲದಿಂದ ನೀರು ಬರಲಾರಂಭಿಸಿತು. ಆದರೂ ಸುಮಾರು ಆರು ಅಡಿಗಳಷ್ಟು ಅಗೆದು ನೀರನ್ನು ಪಂಪ್ ಮಾಡಿ ಹೊರಗೆ ತೆಗೆದು ನಂತರ ಸಿದ್ದ ಪಡಿಸಿದ್ದ ಸಿಮೆಂಟ್ ಕಾಂಕ್ರೀಟ್ ಶೀಟ್ ಬಳಸಿ ಕುಣಿಯನ್ನು ಕವರ್ ಮಾಡಿ ನಂತರ ಮಣ್ಣು ಮಾಡಲಾಯಿತು.



ಕತ್ತಿಯವರ ಅಗಲಿಕೆಯಿಂದ ರಾಜ್ಯದಲ್ಲಿ ಬುಧವಾರದಿಂದ ಮೂರು ದಿನ ಶೋಕಾಚರಣೆ ಆಚರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಮಿತ ಶಾ ಭೇಟಿ : ಬೆಳಗಾವಿ ವಿಮಾನ ನಿಲ್ದಾಣದ ಸುತ್ತ 2 ಕಿ.ಮೀ. ‘ರೆಡ್ ಝೋನ್–ನೋ ಫ್ಲೈ ಝೋನ್’ಗಣೇಶ ಮೆರವಣಿಗೆ ವೇಳೆ ಮಸೀದಿ, ಮದರಸಾ ಮೇಲೆ ಕಲ್ಲುತೂರಾಟ ಆರೋಪಯುಪಿಐ ಶುಲ್ಕಕ್ಕೆ ಅಖಿಲೇಶ ಯಾದವ ಆಕ್ರೋಶದೇಶದ ಇಂಧನ ಭದ್ರತೆ ಕಾಪಾಡಲು ಬದ್ಧಈಶ್ವರಪ್ಪ, ಯತ್ನಾಳ ಅವರನ್ನು ಬಿಜೆಪಿಗೆ ಮರಳಿ ಕರೆತರಬೇಕು: ನಿರಾಣಿ₹50 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಧಾರವಾಡ ತಹಶೀಲ್ದಾರಜಾಗತಿಕ ಚಿಪ್ ಉತ್ಪಾದನೆಯ ವಿಶ್ವಾಸಾರ್ಹ ಕೇಂದ್ರವಾಗುತ್ತಿದೆ ಭಾರತ: ಮೋದಿಬರಪೀಡಿತ ಪಟ್ಟಿಗೆ ಮತ್ತೂ 23 ತಾಲೂಕು; ಒಟ್ಟು 124ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರುಗನ್ ತೋರಿಸಿ ಬೆದರಿಸಿ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ: ಮಾಜಿ ಶಾಸಕ ಸೇರಿ ಇಬ್ಬರ ವಿರುದ್ಧ ಪ್ರಕರಣ