LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಆಘಾತಕಾರಿ: ಸುಪ್ರೀಮ ಕೋರ್ಟ ಅಸಮಾಧಾನ

ಹೊಸದಿಲ್ಲಿ, ಮೇ 29 : ಪ್ರಶ್ನೆಪತ್ರಿಕೆ ಸೋರಿಕೆಯ ಹಿನ್ನೆಲೆಯಲ್ಲಿ ನೀಟ್-ಪದವಿ 2026 ಪರೀಕ್ಷೆ ರದ್ದಾಗಿರುವುದು ಅತ್ಯಂತ ಆಘಾತಕಾರಿ ಬೆಳವಣಿಗೆ ಎಂದು ಸುಪ್ರೀಮ ಕೋರ್ಟ ಶುಕ್ರವಾರ ಅಭಿಪ್ರಾಯಪಟ್ಟಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ಯ ಉತ್ತರದಾಯಿತ್ವದ ಕೊರತೆ ಹಾಗೂ ಪರೀಕ್ಷಾ ವ್ಯವಸ್ಥೆಯ ಸಮಗ್ರತೆ ಕುರಿತೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

2024 ಮತ್ತು 2026ರಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ನಡೆದಿರುವುದು ಪರೀಕ್ಷಾ ವ್ಯವಸ್ಥೆಯಲ್ಲಿನ ಗಂಭೀರ ವೈಫಲ್ಯವನ್ನು ತೋರಿಸುತ್ತದೆ. ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಮ ಕೋರ್ಟ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಆರಾಧೆ ಅವರಿದ್ದ ಪೀಠ, ಕಳೆದ ವರ್ಷ ಹಲವು ಸುಧಾರಣೆಗಳನ್ನು ಜಾರಿಗೊಳಿಸಿದ್ದರೂ ಸೋರಿಕೆ ಪ್ರಕರಣಗಳು ಪುನರಾವರ್ತನೆಯಾಗಿರುವುದು ಕಳವಳಕಾರಿ ಸಂಗತಿ ಎಂದು ಹೇಳಿತು.

ಪ್ರಶ್ನೆಪತ್ರಿಕೆಗಳು ಸೋರಿಕೆಯಾಗುತ್ತಿರುವುದು ಅತ್ಯಂತ ದುರದೃಷ್ಟಕರ. ವಿದ್ಯಾರ್ಥಿಗಳು ನಿರಾಶರಾಗುವಂತಹ ಪರಿಸ್ಥಿತಿಯನ್ನು ಸೃಷ್ಟಿಸಬಾರದು. ಅವರ ಕನಸುಗಳು, ಕುಟುಂಬಗಳ ನಿರೀಕ್ಷೆಗಳು, ವರ್ಷಗಳ ಪರಿಶ್ರಮ ಮತ್ತು ಭಾವನೆಗಳು ಇದರೊಂದಿಗೆ ಬೆಸೆದುಕೊಂಡಿವೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

2024ರ ನೀಟ್-ಪದವಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಬಳಿಕ ಜಾರಿಗೊಳಿಸಲಾದ ಸುಧಾರಣೆಗಳ ಅನುಷ್ಠಾನ ಕುರಿತು ಎನ್‌ಟಿಎ ಹಾಗೂ ಇಸ್ರೊ ಮಾಜಿ ಅಧ್ಯಕ್ಷ ಕೆ. ರಾಧಾಕೃಷ್ಣನ್ ನೇತೃತ್ವದ ಉನ್ನತಾಧಿಕಾರದ ಸಮಿತಿ ಸಲ್ಲಿಸಿದ್ದ ಅಫಿದಾವಿತ್‌ಗಳ ಪರಿಶೀಲನೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.

ನೀಟ್-ಪದವಿ 2026 ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಮೇ 12ರಂದು ಎನ್‌ಟಿಎ ಪರೀಕ್ಷೆಯನ್ನು ರದ್ದುಪಡಿಸಿತ್ತು. ಈ ಕುರಿತು ಅಖಿಲ ಭಾರತ ವೈದ್ಯಕೀಯ ಸಂಘಗಳ ಒಕ್ಕೂಟ ಮತ್ತು ಯುನೈಟೆಡ್ ಡಾಕ್ಟರ್ಸ್ ಫ್ರಂಟ್ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಮ ಕೋರ್ಟ ನಡೆಸುತ್ತಿದೆ.

ಪರಿಣತ ಸಮಿತಿಯ ಬಹುತೇಕ ಶಿಫಾರಸುಗಳನ್ನು ನೀಟ್-ಪದವಿ 2026 ಪರೀಕ್ಷೆಗೆ ಮುನ್ನವೇ ಜಾರಿಗೊಳಿಸಲಾಗಿತ್ತು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದರು. ಮರುಪರೀಕ್ಷೆಗಾಗಿ ಹೆಚ್ಚುವರಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದೂ ಅವರು ಹೇಳಿದರು.

ಆದರೆ ನಿಗಾ ಸಮಿತಿ ಕಾರ್ಯನಿರ್ವಹಿಸುತ್ತಿದ್ದರೂ ಹಾಗೂ ಶಿಫಾರಸುಗಳು ಜಾರಿಯಲ್ಲಿದ್ದರೂ ಪ್ರಶ್ನೆಪತ್ರಿಕೆ ಸೋರಿಕೆ ಹೇಗೆ ನಡೆಯಿತು ಎಂದು ನ್ಯಾಯಾಲಯ ಪದೇ ಪದೇ ಪ್ರಶ್ನಿಸಿತು.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಈ ಬಾರಿಯ ಮುಂಗಾರು ದುರ್ಬಲ, ವಾಡಿಕೆಗಿಂತ ಕಡಿಮೆ ಮಳೆ ಸಾಧ್ಯತೆ3 ತಿಂಗಳಲ್ಲಿ ತೀರ್ಪು ಪ್ರಕಟಿಸಿ: ಎಲ್ಲ ಹೈಕೋರ್ಟಗಳಿಗೆ ಸುಪ್ರೀಮ ಕೋರ್ಟ ನಿರ್ದೇಶನನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಆಘಾತಕಾರಿ: ಸುಪ್ರೀಮ ಕೋರ್ಟ ಅಸಮಾಧಾನವಿಜಯಪುರ ಜಮೀನು ವಿವಾದ: ಗುಂಡಿನ ದಾಳಿ ನಡೆಸಿ, ಕೊಚ್ಚಿ 6 ಮಂದಿಯ ಭೀಕರ ಹತ್ಯೆಸಿದ್ದರಾಮಯ್ಯರ ರಾಜಕೀಯ ಪಯಣ ಮುಂದಿನ ಪೀಳಿಗೆಗೆ ಸ್ಫೂರ್ತಿ: ಪ್ರಿಯಾಂಕ ಖರ್ಗೆಕೋಮು ಗಲಭೆ ತಡೆಯಲು ಸಿದ್ದರಾಮಯ್ಯ ನೀಡಿದ್ದ ಸೂಚನೆ ನೆನೆದ ಸೆಂಥಿಲ್ಟ್ರಯಲ್ಸ್‌ನಲ್ಲಿ ಭಾಗವಹಿಸಲು ವಿನೇಶ ಫೋಗಟ್‌ಗೆ ಸುಪ್ರೀಮ ಕೋರ್ಟ ಅನುಮತಿನ್ಯಾಯಾಂಗದಲ್ಲಿಯೂ ಭ್ರಷ್ಟಾಚಾರ ಇದೆ ಮತ್ತು ನ್ಯಾಯಾಧೀಶರನ್ನು ಪವಿತ್ರ ಗೋವುಗಳಂತೆ ಪರಿಗಣಿಸಬೇಕಿಲ್ಲ : ಮದ್ರಾಸ ಹೈಕೋರ್ಟಎಸಿ ಸ್ಫೋಟ : ಸಿಸಿಐ ಮಾಜಿ ಅಧ್ಯಕ್ಷ ಧನೇಂದ್ರ ಕುಮಾರ ಸಾವುಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷರಾಗಲಿ ಎಂದು ಗೋಕಾಕದಲ್ಲಿ ವಿಶೇಷ ಪೂಜೆ