LIVE TV LocalCrimeNationalInternationalPoliticsBusinessFinancialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Entertainment News

ಅನಂತ ನಾಗ್‌ಗೆ ಫಾಲ್ಕೆ ಪ್ರಶಸ್ತಿ ಪ್ರದಾನ

ಏಕ್ತಾ ನಗರ, ಸೆ. 22 : ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ ನಾಗ್ ಅವರಿಗೆ ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ 2024ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಮಂಗಳವಾರ ಪ್ರದಾನ ಮಾಡಿದರು. ಗುಜರಾತ್‌ನ ನರ್ಮದಾ ಜಿಲ್ಲೆಯ ಏಕ್ತಾ ನಗರದಲ್ಲಿ ನಡೆದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನಂತ ನಾಗ್ ಪ್ರಶಸ್ತಿ ಸ್ವೀಕರಿಸಿದರು. 

ಐದು ದಶಕಗಳಿಗೂ ಹೆಚ್ಚು ಕಾಲ ಕನ್ನಡ ಸೇರಿದಂತೆ ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಅನಂತ ನಾಗ್ ಅವರನ್ನು ಈ ಅತ್ಯುನ್ನತ ಗೌರವಕ್ಕೆ ಆಯ್ಕೆ ಮಾಡಲಾಗಿದೆ. 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಅವರು ಕನ್ನಡದ ಜತೆಗೆ ಹಿಂದಿ ಹಾಗೂ ಇತರ ಭಾಷೆಗಳ ಚಿತ್ರಗಳಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ. ದೂರದರ್ಶನದ ಜನಪ್ರಿಯ ಧಾರಾವಾಹಿ ‘ಮಾಲ್ಗುಡಿ ಡೇಸ್’ನಲ್ಲಿನ ಅಭಿನಯವೂ ಅವರಿಗೆ ರಾಷ್ಟ್ರಮಟ್ಟದ ಮನ್ನಣೆ ತಂದುಕೊಟ್ಟಿತ್ತು.

ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಅನಂತ ನಾಗ್, ಈ ಗೌರವ ತಮ್ಮೊಬ್ಬರದ್ದಲ್ಲ; ತಮ್ಮೊಂದಿಗೆ ಕೆಲಸ ಮಾಡಿದ ನಿರ್ಮಾಪಕರು, ಬರಹಗಾರರು, ನಿರ್ದೇಶಕರು, ಮೇಕಪ್ ಕಲಾವಿದರು, ತಂತ್ರಜ್ಞರು ಮತ್ತು ಪ್ರೇಕ್ಷಕರಿಗೂ ಸೇರಿದ್ದು ಎಂದು ಹೇಳಿದರು. ತಮ್ಮ ರಂಗಭೂಮಿ ದಿನಗಳನ್ನು ಸ್ಮರಿಸಿದ ಅವರು, ಸುಮಾರು 50 ನಾಟಕಗಳಲ್ಲಿ ಅಭಿನಯಿಸಿದ್ದು ತಮ್ಮ ನಟನಾ ಬದುಕಿಗೆ ತರಬೇತಿಯ ನೆಲೆಯಾಗಿತ್ತು ಎಂದರು.

ಅನಂತ ನಾಗ್ ಅವರಿಗೆ 2025ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನೂ ಪ್ರದಾನ ಮಾಡಲಾಗಿತ್ತು. ವಿಶೇಷವೆಂದರೆ, ಡಾ. ರಾಜಕುಮಾರ ಬಳಿಕ ದಾದಾಸಾಹೇಬ ಫಾಲ್ಕೆ ಮತ್ತು ಪದ್ಮಭೂಷಣ ಎರಡೂ ಗೌರವಗಳಿಗೆ ಪಾತ್ರರಾದ ಕನ್ನಡದ ಎರಡನೇ ನಟ ಅನಂತ ನಾಗ್.

‘ಮಿಥ್ಯ’ಗೆ ರಾಷ್ಟ್ರ ಪ್ರಶಸ್ತಿ

ಕರ್ನಾಟಕದ ಪಾಲಿಗೆ ಈ ಸಮಾರಂಭ ಮತ್ತಷ್ಟು ಸಂಭ್ರಮ ತಂದಿತು. ರಕ್ಷಿತ್ ಶೆಟ್ಟಿಯ ಪರಂವಃ ಸ್ಟುಡಿಯೋಸ್ ಹಾಗೂ ಕೆಆರ್‌ಜಿ ಸ್ಟುಡಿಯೋಸ್ ಜಂಟಿಯಾಗಿ ನಿರ್ಮಿಸಿರುವ ಕನ್ನಡದ ‘ಮಿಥ್ಯ’ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿಗೆ ಪಾತ್ರವಾಯಿತು. ತುಳು ಭಾಷೆಯ ‘ಇಂಬು’ ಅತ್ಯುತ್ತಮ ತುಳು ಚಿತ್ರ ಗೌರವವನ್ನು ತನ್ನದಾಗಿಸಿಕೊಂಡಿತು.

ದೇಶದ ಇತರ ಪ್ರಮುಖ ಪ್ರಶಸ್ತಿಗಳಲ್ಲಿ ‘ಆರ್ಟಿಕಲ್ 370’ ಅತ್ಯುತ್ತಮ ಚಲನಚಿತ್ರವಾಗಿ ಆಯ್ಕೆಯಾಗಿದ್ದು, ಅದೇ ಚಿತ್ರದ ಅಭಿನಯಕ್ಕಾಗಿ ಯಾಮಿ ಗೌತಮ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು. ‘ಭ್ರಮಯುಗಂ’ ಚಿತ್ರದ ಅಭಿನಯಕ್ಕಾಗಿ ಮಮ್ಮುಟ್ಟಿ ಹಾಗೂ ‘ಚಂದು ಚಾಂಪಿಯನ್’ಗಾಗಿ ಕಾರ್ತಿಕ್ ಆರ್ಯನ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಜಂಟಿಯಾಗಿ ಪಡೆದರು.

Author
Samadarshi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೇಶದ ಜನತೆಗೆ ಹಬ್ಬದ ಪ್ರಧಾನಿ ಮೋದಿ ದೀಪಾವಳಿ ಶುಭಾಶಯವಿಜಯಪುರ ಕೊಲೆ ಪ್ರಕರಣ: ಪ್ರಮುಖ ಆರೋಪಿ ಕಾಲಿಗೆ ಗುಂಡಿಕ್ಕಿ ಬಂಧನಇಂದಿರಾ ಗಾಂಧಿ ಹತ್ಯೆಯ ಭಯಾನಕ ಕ್ಷಣಗಳನ್ನು ಬಿಚ್ಚಿಟ್ಟ ಸೋನಿಯಾ ಗಾಂಧಿ!ಇ20 ಪೆಟ್ರೋಲ್ ಯೋಜನೆ ‘420’ ಆಗಿದೆ: ಕೇಂದ್ರದ ವಿರುದ್ಧ ರಾಹುಲ್ ವಾಗ್ದಾಳಿಮೋದಿ ಆಡಳಿತದಲ್ಲಿ ದೇಶದ ಅಸ್ತಿತ್ವಕ್ಕೆ ಭಾರಿ ಪೆಟ್ಟು: ಸೋನಿಯಾಚುನಾವಣಾ ಆಯೋಗ ಮೃತರೆಂದು ಘೋಷಿಸಿದ್ದ 1.82 ಲಕ್ಷ ಮತದಾರರು ಜೀವಂತ!‘ಮೋದಿಯನ್ನು ಗೊಂದಲಕ್ಕೀಡು ಮಾಡಬೇಡಿ, ನನ್ನೊಂದಿಗೆ ಬಹಿರಂಗ ಚರ್ಚೆಗೆ ಒಪ್ಪಿಸಿ’ :ಅಮಿತ ಷಾಗೆ ರಾಹುಲ್ ಗಾಂಧಿ ಸವಾಲುಎಸ್‌ಐಆರ್‌ ವಿಚಾರದಲ್ಲಿ ಚುನಾವಣಾ ಆಯೋಗ ಯೂಟರ್ನ: ಮತದಾರರ ಮರುಸೇರ್ಪಡೆಗೆ ಫಾರ್ಮ-6 ಕಡ್ಡಾಯವಲ್ಲಇಂಗ್ಲೆಂಡ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ಗುಜರಾತ ಮಹಿಳೆಯಿಂದ ಬೆಳಗಾವಿ ವೈದ್ಯರಿಗೆ ₹28.15 ಲಕ್ಷ ವಂಚನೆಅಮೆರಿಕ ಚುನಾವಣೆಯಲ್ಲಿ ಸೋಲಿನ ಆಘಾತ; ಇರಾನ್ ವಿರುದ್ಧ ಟ್ರಂಪ್ ಗುಡುಗು