ಘಟಪ್ರಭಾ ಪಟ್ಟಣದಲ್ಲಿರುವ ನವೋದಯ ಫೈನಾನ್ಸ, ಜಗಜ್ಯೋತಿ ಸೌಹಾರ್ದ ಸಹಕಾರಿ ಸಂಘವು ಸರ್ವಜ್ಞ ಚಿಟ್ ಹೆಸರಿನಲ್ಲಿ ಅಂದಾಜು 25 ಕೋಟಿ ರೂಪಾಯಿ ವಂಚನೆ ಆರೋಪ ಮಾಡಿದೆ ಎಂದು ಆರೋಪಿಸಿ ವಂಚನೆಗೊಳಗಾದವರು ಫೈನಾನ್ಸ್ನ ಆಡಳಿತ ಮಂಡಳಿ ಮತ್ತು ಸದಸ್ಯರ ಮನೆಗಳ ಮುಂದೆ ಪ್ರತಿಭಟನೆ ನಡೆಸಿದರು.

ಈ ವೇಳೆ ಮನೆಯ ಮುಂದೆ ಬೊಬ್ಬೆಹಾಕಿ, ತಮಟೆ, ಪಾತ್ರೆಗಳನ್ನು ಬಾರಿಸಿ ಪ್ರತಿಭಟನೆ ನಡೆಸಿದ ಜನರು, ನಮ್ಮ ದುಡಿದ ಹಣ ವಾಪಸ್ ಕೊಡಿ ಎಂದು ಘೋಷಣೆ ಕೂಗಿದರು.








