ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಚಿಕ್ಕೋಡಿ: ಕಾಲುವೆಯಲ್ಲಿ ಮಲಗಿ ರೈತರ ಪ್ರತಿಭಟನೆ

ಬೆಳಗಾವಿ : ಚಿಕ್ಕೋಡಿ ತಾಲ್ಲೂಕಿನ ಡೊಣವಾಡ ಗ್ರಾಮದ ಮಹಾಂತ ನಗರ ಸೇರಿ ವಿವಿಧ ತೋಟದ ವಸತಿ ಪ್ರದೇಶದ ಜನರು ಶುಕ್ರವಾರ ಒಣಗಿರುವ ನೀರಾವರಿ ಕಾಲುವೆಯಲ್ಲೇ ಅಡ್ಡಲಾಗಿ ಮಲಗಿ, ಪ್ರತಿಭಟನೆ ಮಾಡಿದರು.

ಕೊಟಬಾಗಿ ಏತ ನೀರಾವರಿಯ ಕಾಲುವೆಗೆ ನೀರು ಹರಿಸದ ಕಾರಣ ಪ್ರತಿ ವರ್ಷ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗುತ್ತದೆ. ಇದರ ನಿವಾರಣೆಗೆ
ಕೂಡಲೇ ಕಾಲುವೆಯ ಕೊನೆಯ ಭಾಗದವರೆಗೂ ನೀರು ದೊರೆಯುವಂತೆ ನೀರು ಹರಿಸಿ' ಎಂದು ಆಗ್ರಹಿಸಿದರು.

ಕರ್ನಾಟಕ ನೀರಾವರಿ ನಿಗಮ ನಿಯಮಿತದಿಂದ ನಿರ್ವಹಣೆ ಆಗುವ 17 ಕಿ.ಮೀ ಉದ್ದದ ಕಾಲುವೆಯಲ್ಲಿ 178.62 ಕ್ಯೂಸೆಕ್ ನೀರು ಹರಿಯಬೇಕಿತ್ತು ಎಂದು ಪ್ರತಿಪಾದಿಸಿದರು.

'ನಿತ್ಯ ಬಳಕೆಗೆ ಮತ್ತು ಕೃಷಿಗೆ ಅನುಕೂಲವಾಗುವದಕ್ಕೆ ಉದ್ಯೋಗ ಖಾತ್ರಿ ಯೋಜನೆಯಡಿ ಕಾಲುವೆಯ ಹೂಳು ತೆರವು ಮಾಡಲಾಗಿದೆ. ಆದರೆ, ಅಧಿಕಾರಿಗಳು ನೀರು ಬಿಡುಗಡೆಗೆ ಮೀನ-ಮೇಷ ತೋರುತ್ತಿದ್ದಾರೆ' ಎಂದು ರೈತ ಮುಖಂಡ ರಾಚಪ್ಪ ಶಿವಾಪೂರೆ ಆರೋಪಿಸಿದರು.

"ಕೆಲವೆಡೆ ಕಾಲುವೆ ನೀರನ್ನು ಹಳ್ಳಕ್ಕೆ ಬಿಡಲಾಗುತ್ತಿದೆ. ಕಾಲುವೆ ಕೊನೆವರೆಗೆ ನೀರು ಹರಿಯುತ್ತಿಲ್ಲ. ಕಾಲುವೆಯ ಕೊನೆ ಭಾಗದ ರೈತರು ನೀರು ಇಲ್ಲದೇ ಬೆಳೆಯನ್ನು ಹೇಗೆ ಉಳಿಸಿಕೊಳ್ಳುವುದು ಹೇಗೆ? ಜನ ಜಾನುವಾರುಗಳಿಗೆ ಕುಡಿಯುವ ನೀರು ಇಲ್ಲದೇ ತೊಂದರೆ ಅನುಭವಿಸುವಂತಾಗಿದೆ' ಎಂದು ರೈತ ಬಾಬು ಮಗದುಮ್ಮ ತಿಳಿಸಿದರು.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.