LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಶೀಘ್ರವೇ 5 ಸಾವಿರ ಕಾನ್ಸ​ಟೇಬಲ್​ಗಳ ನೇಮಕ

ಬೆಂಗಳೂರು: ಶೀಘ್ರವೇ ಐದು ಸಾವಿರ ಕಾನ್ಸಟೇಬಲ್​ಗಳ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನಸಭೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಘೋಷಣೆ ಮಾಡಿದ್ದಾರೆ.



ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಪೊಲೀಸ್​ ಕಾನ್ಸ್‌ಟೇಬಲ್​​ಗಳ ನೇಮಕಾತಿ ವಿಳಂಬ ಬಗ್ಗೆ ಬಿಜೆಪಿ ಶಾಸಕ ಪ್ರೀತಮ ಗೌಡ ಪ್ರಶ್ನೆ ಮಾಡಿದ್ರು. ಈ ಪ್ರಶ್ನೆಗೆ ಉತ್ತರಿಸಿದ ಆರಗ ಜ್ಞಾನೇಂದ್ರ, 9,432 ಪೊಲೀಸ್ ಕಾನ್ಸ​ಟೇಬಲ್​ ಹುದ್ದೆಗಳು ಖಾಲಿ ಇವೆ. ಈಗ 3,500 ಕಾನ್ಸಟೇಬಲ್ ಗಳ​​ ನೇಮಕಕ್ಕೆ ನೋಟಿಫಿಕೇಷನ್ ಆಗಿದೆ. ಶೀಘ್ರವೇ ಮತ್ತೆ 5 ಸಾವಿರ ಕಾನ್ಸ್​ಟೇಬಲ್​ಗಳ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವರು ಭರವಸೆ ನೀಡಿದರು.



ಕೋವಿಡ್ ವೇಳೆ ಪೊಲೀಸ್​ ನೇಮಕಾತಿ ಆಗಿಲ್ಲ ಅನ್ನೋದು ತಪ್ಪು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟನೆ ನೀಡಿದರು.. ಆಗ



ಕೋವಿಡ್ ಕಾರಣದಿಂದ ಕಾನ್ಸ್​ಟೇಬಲ್​ ನೇಮಕಾತಿ ವಿಳಂಬ ಆಗಿದೆ. ಹೀಗಾಗಿ ಕಾನ್ಸ್​ಟೇಬಲ್​​ ನೇಮಕಾತಿ ವಯೋಮಿತಿ ಹೆಚ್ಚಿಸುವಂತೆ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಆರಗ ಜ್ಞಾನೇಂದ್ರ, ಸಾಮಾನ್ಯ ವರ್ಗಕ್ಕೆ 18ರಿಂದ 25 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ. ವಯೋಮಿತಿ ಸಡಿಲಿಸಲು ನನಗೂ ಕೂಡ ಫೋನ್ ಬರುತ್ತಿವೆ. ಆದರೆ ಕೋವಿಡ್ ವೇಳೆ ನೇಮಕಾತಿ ಆಗಿಲ್ಲ ಎಂಬುದು ತಪ್ಪು. ಕೋವಿಡ್ ಅವಧಿಯಲ್ಲಿ ಪೊಲೀಸ್ ನೇಮಕಾತಿ ನಿಂತಿರಲಿಲ್ಲ. ವಯೋಮಿತಿ ಹೆಚ್ಚಳ ಮಾಡುವ ಯೋಚನೆ ಸದ್ಯಕ್ಕಿಲ್ಲ ಎಂದರು.
Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹವಳದ ದಿಬ್ಬಗಳ ನಡುವೆ ರಾಹುಲ್ ಸಾಹಸರೂಪಾಯಿ 100 ತಲುಪಿದರೂ ಆತಂಕ ಬೇಡ ಎಂದ ಮೋದಿಯ ಆರ್ಥಿಕ ಸಲಹೆಗಾರ್ತಿ : ವ್ಯಾಪಕ ಟೀಕೆಅಮೂಲ್ಯ ಪರಿಸರ ಸಂಪತ್ತಿಗೆ ಬೆದರಿಕೆ ಒಡ್ಡಿದ ಯೋಜನೆ ಗ್ರೇಟ್ ನಿಕೋಬಾರ್ ಯೋಜನೆಭಿನ್ನಾಭಿಪ್ರಾಯ ಬಗೆಹರಿಸುವ ವಿಶ್ವಾಸ ವ್ಯಕ್ತಪಡಿಸಿದ ಸಿಎಂಖಾತೆ ಹಂಚಿಕೆ ಕಿಡಿ: ಮುನಿಯಪ್ಪ ಅಸಮಾಧಾನ, ಖಾತೆ ವಹಿಸಿಕೊಳ್ಳಲು ನಿರಾಕರಣೆಗುಂಡಿನ ದಾಳಿಗೆ ನಲುಗಿದ ಮಣಿಪುರ : ಮೂವರು ನಾಗರಿಕರ ಹತ್ಯೆ, 7 ಮನೆಗಳಿಗೆ ಬೆಂಕಿ ರೆಪೊ ದರದಲ್ಲಿ ಬದಲಾವಣೆ ಇಲ್ಲಖಾತೆ ಹಂಚಿಕೆ ಬಗ್ಗೆ ಅಸಮಾಧಾನ; ಸಚಿವ ಸ್ಥಾನ ತೊರೆದ ರಾಮಲಿಂಗಾ ರೆಡ್ಡಿಖಾತೆಗಳ ಹಂಚಿಕೆ ಕಸರತ್ತು ಪೂರ್ಣ, ಯಾರಿಗೆ ಯಾವ ಖಾತೆ? ಜೀವ ಉಳಿಸಿದ ಮಾನವೀಯತೆ : ದಿಲ್ಲಿ ಅಗ್ನಿ ದುರಂತದಲ್ಲಿ ಮುಸ್ಲಿಂ ಯುವಕರ ಸಾಹಸಕ್ಕೆ ವ್ಯಾಪಕ ಮೆಚ್ಚುಗೆ