LIVE TV LocalCrimeNationalInternationalPoliticsFinancialEducationTechnologyEntertainmentSportsHealthFeatureTravelingBeautyRecipes
State News

ಗೋಕರ್ಣದಲ್ಲಿ ಅಲೆಗಳಿಗೆ ಸಿಲುಕಿದ್ದ ಮೂವರು ಪ್ರವಾಸಿಗರ ರಕ್ಷಣೆ

ಕಾರವಾರ, ಅ. 22 (ಸಮದರ್ಶಿ ಸುದ್ದಿ): ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಮುಖ್ಯ ಕಡಲ ತೀರದಲ್ಲಿ ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿ ಮುಳುಗುವ ಅಪಾಯ ಎದುರಿಸುತ್ತಿದ್ದ ಮೂವರು ಪ್ರವಾಸಿಗರನ್ನು ಜೀವ ರಕ್ಷಕ ಹಾಗೂ ಜಲಕ್ರೀಡಾ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಬುಧವಾರ ಸಂಜೆ ಸುಮಾರು 4.30ರ ವೇಳೆಗೆ ಆರು ಮಂದಿ ಸ್ನೇಹಿತರ ತಂಡ ಗೋಕರ್ಣದ ಮುಖ್ಯ ಕಡಲ ತೀರಕ್ಕೆ ಭೇಟಿ ನೀಡಿ ಸಮುದ್ರದಲ್ಲಿ ಈಜಲು ಇಳಿದಿತ್ತು. ಈ ವೇಳೆ ಮೂವರು ಪ್ರವಾಸಿಗರು ಅಲೆಗಳ ಅಬ್ಬರ ಹಾಗೂ ನೀರಿನ ಸುಳಿಗೆ ಸಿಲುಕಿ ದಡಕ್ಕೆ ಮರಳಲಾಗದೆ ಸಂಕಷ್ಟಕ್ಕೆ ಒಳಗಾಗಿದ್ದರು.

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಮಹಮದ್ ಅಪ್ಸನ್ ಅಲಿ (21), ಆಶ್ರಫ್ ಮೆಹಬೂಬ ಅಲಿ (22) ಹಾಗೂ ಚಿಕ್ಕಬಳ್ಳಾಪುರ ಮೂಲದ ಶ್ರೀನಿವಾಸ ವೆಂಕಟಸ್ವಾಮಿ (35) ರಕ್ಷಿಸಲ್ಪಟ್ಟ ಪ್ರವಾಸಿಗರು.

ಸಮುದ್ರದಲ್ಲಿ ಮೂವರು ಮುಳುಗುತ್ತಿರುವುದನ್ನು ಗಮನಿಸಿದ ಕರ್ತವ್ಯ ನಿರತ ಜೀವ ರಕ್ಷಕ ಸಿಬ್ಬಂದಿಗಳಾದ ಮೋಹನ್ ಅಂಬಿಗ, ರೋಷನ್ ಖಾರ್ವಿ ಹಾಗೂ ಲೋಕೇಶ ಹರಿಕಂತ್ರ ತಕ್ಷಣ ರಕ್ಷಣೆಗೆ ಧಾವಿಸಿದರು. ಅಲೆಗಳ ಸೆಳೆತದ ನಡುವೆಯೂ ಕಾರ್ಯಾಚರಣೆ ನಡೆಸಿ ಪ್ರವಾಸಿಗರನ್ನು ಸುರಕ್ಷಿತವಾಗಿ ದಡಕ್ಕೆ ಕರೆತರುವಲ್ಲಿ ಯಶಸ್ವಿಯಾದರು.

ಈ ಕಾರ್ಯಾಚರಣೆಗೆ ಜೀವ ರಕ್ಷಕ ಸಿಬ್ಬಂದಿಯ ಮೇಲ್ವಿಚಾರಕ ರವಿ ನಾಯ್ಕ, ಪ್ರವಾಸಿ ಮಿತ್ರ ಶೇಖರ ಹರಿಕಂತ್ರ ಹಾಗೂ ಗೋಕರ್ಣ ಮುಖ್ಯ ಕಡಲ ತೀರದ ಜಲಕ್ರೀಡಾ ಸಿಬ್ಬಂದಿಗಳಾದ ದೀಪಕ ಗೌಡ ಮತ್ತು ಮಹೇಶ ಹೊಸಕಟ್ಟೆ ಸಹಕಾರ ನೀಡಿದರು.

ಸಿಬ್ಬಂದಿಯ ಸಮಯಪ್ರಜ್ಞೆ ಹಾಗೂ ತ್ವರಿತ ರಕ್ಷಣಾ ಕಾರ್ಯಾಚರಣೆಯಿಂದ ಮೂವರು ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರವಾಸಿಗರ ಜೀವ ಉಳಿಸಿದ ಸಿಬ್ಬಂದಿಯ ಕಾರ್ಯಕ್ಕೆ ಸ್ಥಳೀಯರು ಹಾಗೂ ಪ್ರವಾಸಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬರ : 20,585 ಕೋಟಿ ರೂ. ಬಿಡುಗಡೆಗೆ ಕೇಂದ್ರಕ್ಕೆ ಪರಮೇಶ್ವರ ಆಗ್ರಹಇನಸ್ಟಾಗ್ರಾಮಗೆ ಕಾಲಿಟ್ಟ ಸೋನಿಯಾ ಗಾಂಧಿ: ಆತ್ಮಕತೆಯ ಮೊದಲ ನೋಟ ಬಿಡುಗಡೆನ್ಯಾಯಾಧೀಶರ ಸಾಂವಿಧಾನಿಕ ಬದ್ಧತೆ ಪ್ರಶ್ನಿಸಿದ್ದ ಶಿವಸುಂದರ ಫೇಸಬುಕ್ ಪೋಸ್ಟಗೆ ನಿರ್ಬಂಧಪೊಲೀಸರ ಲಾಠಿ ಏಟು: 4 ವರ್ಷದ ಬಾಲಕನಿಗೆ ಗಂಭೀರ ಗಾಯದಸರಾ ವೇಳೆ ಸಚಿವರನ್ನು ತಡೆದ ಪ್ರಕರಣ: ತನಿಖೆಗೆ ಮುಖ್ಯ ಕಾರ್ಯದರ್ಶಿಗೆ ಸೂಚನೆಸೌದಿ ವಿಮಾನ ನಿಲ್ದಾಣದ ಮೇಲೆ ದಾಳಿ: ಭಾರತೀಯ ಸೇರಿ ಇಬ್ಬರ ಸಾವು, 8 ಮಂದಿಗೆ ಗಾಯಜೈಲಿನಿಂದ ಬಿಡುಗಡೆಯಾದ ಮರುದಿನವೇ ಸಿಜೆಪಿ ನಾಯಕರಿಗೆ ಕ್ರೈಮ್ ಬ್ರಾಂಚ್ ಸಮನ್ಸಪುತ್ರನ ಛಾಯಾಚಿತ್ರಗಳಿಗೆ ನಿರ್ಬಂಧ: ಪ್ರಿಯಾಂಕಾ ಆಕ್ರೋಶರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂದಿನ 5 ದಿನ ಗುಡುಗು ಸಹಿತ ಮಳೆಗೋಕರ್ಣದಲ್ಲಿ ಅಲೆಗಳಿಗೆ ಸಿಲುಕಿದ್ದ ಮೂವರು ಪ್ರವಾಸಿಗರ ರಕ್ಷಣೆ