LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
National News

ರೇವಂತ ರೆಡ್ಡಿ ತೆಲಂಗಾಣ ಮುಖ್ಯಮಂತ್ರಿ ರೇಸ್‌ ನಲ್ಲಿ ಮುಂದೆ

ಹೈದರಾಬಾದ, ೫:  ತೆಲಂಗಾಣ ಕಾಂಗ್ರೆಸ್ ರಾಜ್ಯಾಧ್ಯಕ್ಷ ರೇವಂತ ರೆಡ್ಡಿ ಹೈಕಮಾಂಡ್ ನ ಮೊದಲ ಆಯ್ಕೆ ಆಗಿದ್ದು ನಾಳೆ ಅಥವಾ ಗುರುವಾರ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಬಹುದು ಎಂದು ಮೂಲಗಳು ತಿಳಿಸಿವೆ.



ಹಿರಿಯರಾದ ಉತ್ತಮ ಕುಮಾರ ರೆಡ್ಡಿ ಮತ್ತು ಭಟ್ಟಿ ವಿಕ್ರಮಾಕ ಕೂಡ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದು ಆದರೆ ಹೈಕಮಾಂಡ್ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ಅಥವಾ ಉತ್ತಮ ಖಾತೆ ನೀಡುವ ಆಲೋಚನೆಯಲ್ಲಿದೆ. ಆದರೆ ಮುಖ್ಯಮಂತ್ರಿ ಸ್ಥಾನದ ಕುರಿತು ಇದುವರೆಗೆ ಹೈಕಮಾಂಡ್ ಇದುವರೆಗೂ ಬಾಯಿ ಬಿಟ್ಟಿಲ್ಲ.



ಪಂಚರಾಜ್ಯ ಚುನಾವಣಾ ಫಲಿತಾಂಶಗಳ ಪೈಕಿ ತೆಲಂಗಾಣದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದಿದೆ. ಕರ್ನಾಟಕದ ನಂತರ, ತೆಲಂಗಾಣ ದಕ್ಷಿಣದ ಎರಡನೇ ರಾಜ್ಯವಾಗಿದ್ದು, ಅಲ್ಲಿ ಕಾಂಗ್ರೆಸ್ ತನ್ನದೇ ಆದ ಸರ್ಕಾರವನ್ನು ರಚಿಸುತ್ತಿದೆ. ತೆಲಂಗಾಣದಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಮೊದಲಿನಿಂದಲೂ ಮುಖ್ಯಮಂತ್ರಿ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದರು.



ತೆಲಂಗಾಣ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ರೇವಂತ್ ರೆಡ್ಡಿ ಕಾಂಗ್ರೆಸ್‌ನ ಮುಖವಾಗಿದ್ದರು. ಪ್ರಚಾರದ ಸಮಯದಲ್ಲಿ ಅವರು ಯಾವಾಗಲೂ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯೊಂದಿಗೆ ಕಾಣುತ್ತಿದ್ದರು. ತೆಲಂಗಾಣದಲ್ಲಿ ಗೆಲುವಿನ ಗರಿಷ್ಠ ಶ್ರೇಯಸ್ಸು ರೇವಂತ ರೆಡ್ಡಿ ಅವರಿಗೆ ಸಲ್ಲುತ್ತದೆ. ಇದೇ ಕಾರಣಕ್ಕೆ ಅವರ ಹೆಸರು ಮುಖ್ಯಮಂತ್ರಿ ಹುದ್ದೆಗೆ ಮುಂಚೂಣಿಯಲ್ಲಿ ಉಳಿಯಿತು. ರೇವಂತ ರೆಡ್ಡಿ ಪ್ರಸ್ತುತ ತೆಲಂಗಾಣ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ. 2019 ರಲ್ಲಿ ಗೆದ್ದ ತೆಲಂಗಾಣದ ಮೂವರು ಕಾಂಗ್ರೆಸ್ ಲೋಕಸಭಾ ಸಂಸದರಲ್ಲಿ ರೆಡ್ಡಿ ಕೂಡ ಒಬ್ಬರು.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತೀಶ ಜಾರಕಿಹೊಳಿ, ಆಪ್ತರ ಮನೆಗಳಲ್ಲಿ ಇಡಿ ಶೋಧ ಅಂತ್ಯಸತೀಶ ಜಾರಕಿಹೊಳಿ ಮೇಲಿನ ಇಡಿ ದಾಳಿ ರಾಜಕೀಯ ಪ್ರೇರಿತ: ಲಕ್ಷ್ಮಿ ಹೆಬ್ಬಾಳಕರಡಿ.ಕೆ. ಶಿವಕುಮಾರ ತಾಯಿಗೆ ನೋಟಿಸ್ ನೀಡಿಲ್ಲಮತ್ತೆ ಗಾಯಗೊಂಡ ಹರ್ಷಿತ ರಾಣಾ: ಅಫ್ಘಾನಿಸ್ತಾನ ಸರಣಿ, ಏಷ್ಯನ್ ಗೇಮ್ಸ್‌ನಿಂದ ಹೊರಕ್ಕೆಎಸ್‌ಐಆರ್‌ ಅಚ್ಚರಿ: ಒಂದೇ ಮತಗಟ್ಟೆಯ 729 ಮತದಾರರಲ್ಲಿ 728 ಮಂದಿಯ ಹೆಸರು ಡಿಲೀಟ್!14 ವರ್ಷದ ನಿಶುಗೆ ಅತ್ಯಾಚಾರ ಬೆದರಿಕೆ: ತಕ್ಷಣ ರಕ್ಷಣೆಗೆ ಸುಪ್ರೀಂ ಕೋರ್ಟ ಸೂಚನೆ‘ನನ್ನನ್ನು ಪ್ರಚಾರದ ಸಾಧನವಾಗಿ ಬಳಸಲಾಗಿದೆ’: ಭಾರತ ಸರ್ಕಾರದ ವಿರುದ್ಧ ವಿಜಯ ಮಲ್ಯ ಆರೋಪಉಳಿದ ಭರವಸೆಗಳ ಈಡೇರಿಕೆಗೆ ವೇಗ ನೀಡಿ: ಸರ್ಕಾರಕ್ಕೆ ಸಿದ್ದರಾಮಯ್ಯ ಸಲಹೆಎಸ್‌ಐಆರ್ : ಡಿ.ಕೆ. ಶಿವಕುಮಾರ ತಾಯಿ ಸೇರಿ ಹಲವು ಗಣ್ಯರಿಗೆ ನೋಟಿಸ್ಗರ್ಬಾದಲ್ಲಿ ಮುಸ್ಲಿಮರಿಗೆ ನಿಷೇಧ ಸರಿಯಲ್ಲ; ಸಂವಿಧಾನ ಎಲ್ಲರಿಗೂ ಸಮಾನ ಹಕ್ಕು ನೀಡಿದೆ: ಅಠಾವಳೆ