ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಮೈಸೂರಿನಿಂದಲೇ ಕುಕ್ಕರ್ ಬಾಂಬ್ ತಂದಿದ್ದ ಶಾರೀಕ!

ಮಂಗಳೂರು, ೨೧- ಮಂಗಳೂರಿನಲ್ಲಿ ಆಟೋದಲ್ಲಿ ಸಂಭವಿಸಿದ ಸ್ಪೋಟ ಉಗ್ರ ಕೃತ್ಯ ಎಂಬುದು ಈಗ ಬಹಿರಂಗವಾಗಿದೆ. ಈ ಘಟನೆಯ ಬೆನ್ನಲ್ಲೇ ರಾಜ್ಯದಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ಇದರ ಮಧ್ಯೆ ಶಂಕಿತ ಶಾರೀಕನ ಕುರಿತು ಒಂದೊಂದೇ ಸ್ಪೋಟಕ ಮಾಹಿತಿಗಳು ಬಹಿರಂಗವಾಗುತ್ತಿವೆ.

ಮೈಸೂರಿನ ಮೇಟಗಳ್ಳಿ ಬಳಿಯ ಲೋಕ ನಾಯಕ ನಗರದ ಸಂಜೀವಿನಿ ರಸ್ತೆಯ ಬಾಡಿಗೆ ಮನೆಯಲ್ಲಿ ಶಾರೀಕ ವಾಸವಾಗಿದ್ದ, ಘಟನೆ ನಡೆದ ದಿನ ಮೈಸೂರಿನಿಂದ ಮಂಗಳೂರಿಗೆ ಬಂದಿದ್ದ ಎಂದು ಹೇಳಲಾಗಿದೆ.

ಮೈಸೂರಿನಲ್ಲಿ ಕುಕ್ಕರ್ ಬಾಂಬ್ ತಯಾರಿಸಿರುವ ಕುರಿತು ಅನುಮಾನಗಳು ವ್ಯಕ್ತವಾಗಿದ್ದು, ಇದಕ್ಕೆ ಪುಷ್ಟಿ ನೀಡುವಂತೆ ಈತ ವಾಸವಾಗಿದ್ದ ಮನೆಯಲ್ಲಿ ಸರ್ಕಿಟ್ ಬೋರ್ಡ್, ಪ್ರೆಷರ್ ಕುಕ್ಕರ್, ಬ್ಯಾಟರಿ, ಮಲ್ಟಿ ಮೀಟರ್ ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿವೆ.

ಬಸ್ಸಿನಲ್ಲಿ ಮಂಗಳೂರಿಗೆ ಬಂದ ಈತ ಪಡೀಲ್ ನಲ್ಲಿ ಇಳಿದಿದ್ದು, ಆಟೋದಲ್ಲಿ ಹೋಗುವಾಗ ಈ ಸ್ಪೋಟ ಸಂಭವಿಸಿತ್ತು. ಒಂದು ವೇಳೆ ಬಸ್ಸಿನಲ್ಲಿ ಈ ಸ್ಪೋಟ ಸಂಭವಿಸಿದ್ದರೆ ಹೆಚ್ಚಿನ ಅನಾಹುತವಾಗುತ್ತಿತ್ತು ಎನ್ನಲಾಗಿದೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.