ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬಾದಾಮಿಯಿಂದಲೇ ಸ್ಪರ್ಧೆಸುವಂತೆ ಒತ್ತಡ : ಸಿದ್ದರಾಮಯ್ಯ

ಬೆಳಗಾವಿ: ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧೆಗೆ ಒತ್ತಡ ಹೆಚ್ಚಿದೆ ಇದೆ. ಸಾವಿರಾರು ಜನ ಹೆಣ್ಣು ಮಕ್ಕಳ ಮನೆ ಎದುರು ಧರಣಿ ಮಾಡ್ತೇವೆ ಅಂತಾ ಒತ್ತಡ ಹಾಕಿದಲ್ಲದೇ ಪತ್ರ ಬರೆದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ವರುಣಾದಿಂದ ನಿಂತುಕೊಳ್ಳಬೇಕು ಅಂತಾ ನಮ್ಮ ಹುಡುಗ ಹೇಳ್ತಿದ್ದಾನೆ. ಚಾಮರಾಜಪೇಟೆಯಿಂದ ನಿಂತುಕೊಳ್ಳಬೇಕು ಅಂತಾ ಜಮೀರ ಹೇಳುತ್ತಿದ್ದಾನೆ ಎಂದು ಹೇಳಿದ್ದಾರೆ.

ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸುವಂತೆ ಹೆಚ್ಚಿನ ಒತ್ತಡ ಇದೆ. ಸಾವಿರಾರು ಹೆಣ್ಣು ಮಕ್ಕಳು ಮನೆ ಎದುರು ಧರಣಿ ಮಾಡ್ತೇವೆ ಅಂತಾ ಒತ್ತಡ ಹಾಕಿದಲ್ಲದೇ ಪತ್ರ ಬರೆದಿದ್ದಾರೆ. ನಾನು ಏಕೆ ಯೋಚನೆ ಮಾಡ್ತಿರುವುದು ಅಂದ್ರೆ ವಾರಕ್ಕೊಮ್ಮೆ ಹೋಗಿ ಅಲ್ಲಿ ಇರೋದಕ್ಕೆ ಆಗುವುದಿಲ್ಲ. ಕಾರ್ಯಕರ್ತರಿಗೆ, ಜನರಿಗೆ ಸಿಗುವುದಕ್ಕಾಗಲ್ಲ, ಅವರ ಕಷ್ಟ ಸುಖಗಳಿಗೆ ಸ್ಪಂದಿಸೋದಕ್ಕೆ ಆಗೋದಿಲ್ಲ. ನೀವು ಬಂದು ನಿಂತುಕೊಳ್ಳಿ ಅಂತಾ ಅವರು ಹೇಳಬಹುದು. ಆದರೆ ನನಗೆ ಮನಸು ಒಪ್ಪುತ್ತಿಲ್ಲ. ಎರಡು ತಿಂಗಳಿನಿಂದ ಬಾದಾಮಿಗೆ ಹೋಗಿಲ್ಲ. ನಾಳೆ ಹೋಗಬೇಕೆಂದುಕೊಂಡಿದ್ದೆ, ಅದೂ ಕ್ಯಾನ್ಸಲ್ ಆಗಿದೆ ಎಂದು ಹೇಳಿದ್ದಾರೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.