ಗೋಕಾಕ, ಮೇ 29 : ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೇರಲಿ ಎಂದು ಆಶಿಸಿ ಗೋಕಾಕ ನಗರದ ಶ್ರೀ ಲಕ್ಷ್ಮೀದೇವಿ ದೇವಸ್ಥಾನದಲ್ಲಿ ಭೂವಿ ಗಾಡಿವಡ್ಡರ ಸಮಾಜದ ಮುಖಂಡರು ವಿಶೇಷ ಪೂಜೆ ಸಲ್ಲಿಸಿದರು.
ನಗರದ ಪ್ರಸಿದ್ಧ ಶ್ರೀ ಲಕ್ಷ್ಮೀದೇವಿ ದೇವಸ್ಥಾನದಲ್ಲಿ ಸಮಾಜದ ಮುಖಂಡರು ದೇವಿಗೆ ವಿಶೇಷ ಆರತಿ ನೆರವೇರಿಸಿ ಪ್ರಾರ್ಥನೆ ಸಲ್ಲಿಸಿದರು. ಸತೀಶ ಜಾರಕಿಹೊಳಿ ಅವರಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ರಾಜಕೀಯ ಶಕ್ತಿ ಹಾಗೂ ಯಶಸ್ಸು ದೊರೆಯಲಿ. ಅವರು ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸುವ ಅವಕಾಶ ಸಿಗಲಿ ಎಂದು ಭಕ್ತಿಪೂರ್ವಕವಾಗಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ವಿವೇಕ ಜತ್ತಿ, ಸಮಾಜದ ಮುಖಂಡರಾದ ಲಕ್ಷ್ಮಣ ಗಾಡಿವಡ್ಡರ, ಹಣಮಂತ ಸಾಗರ, ಪವನ ಮಹಾಲಿಂಗಪುರ, ಭರಮಣ್ಣ ಗಾಡಿವಡ್ಡರ, ಶಟ್ಟೆಪ್ಪ ಗಾಡಿವಡ್ಡರ, ಯಲ್ಲಪ್ಪ ಶಿಲ್ಪಿ, ಹಣಮಂತ ಮನೋವಡ್ಡರ, ರಾಜು ಗಾಡಿವಡ್ಡರ, ಕಲ್ಲೋಲೆಪ್ಪ, ಬಲ್ಲಾಳ ಹಾಗೂ ಪರಶುರಾಮ ಬಡಿವಡ್ಡರ ಸೇರಿದಂತೆ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.