LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News

ಕಿತ್ತೂರ ತಹಶೀಲ್ದಾರರನ್ನು ಹಿಡಿದುಕೊಟ್ಟಿದ್ದ ದೂರುದಾರನ ತಂದೆಯ ಸಾವು

ಕಿತ್ತೂರು : ಜಮೀನಿನ ಖಾತೆ ಬದಲಾವಣೆಗಾಗಿ ಲಂಚ ಕೇಳಿದ್ದ ಕಿತ್ತೂರು ತಹಶೀಲ್ದಾರ, ಗುಮಾಸ್ತರ ನ್ನು ಲಂಚದ ಸಮೇತ ಲೋಕಾಯುಕ್ತರಿಗೆ ಬಲೆಗೆ ಹಿಡಿದುಕೊಟ್ಟ ಅರ್ಜಿದಾರರ ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.



ಕಿತ್ತೂರು ತಾಲೂಕಿನ ಖೋದಾನಪುರ ಗ್ರಾಮದಲ್ಲಿ ಬಾಪುಸಾಹೇಬ ಇನಾಮದಾರ ಅವರು ಹೃದಯಘಾತದಿಂದ ಸಾವನ್ನಪ್ಪಿದ್ದಾರೆ. ಇವರ ಪುತ್ರ ರಾಜೇಂದ್ರ ಇನಾಮದಾರ ದೂರು ನೀಡಿದ್ದರು.



10 ಎಕರೆ ಜಮೀನಿನ ಖಾತಾ ಬದಲಾವಣೆ ಸಂಬಂಧ ಲಂಚ ಕೇಳಿದ್ದ ತಹಶೀಲದಾರ ಮೇಲೆ ಅವರು ಲೋಕಾಯುಕ್ತ ಠಾಣೆಗೆ ದೂರು ನೀಡಿದ್ದರು. ನಿನ್ನೆ ತಡರಾತ್ರಿ ತಹಶೀಲದಾರರ ಮನೆಯಲ್ಲಿ 2 ಲಕ್ಷ ರೂ. ಹಣ ಪಡೆಯುವಾಗ ತಹಶೀಲದಾರ ಸೋಮಲಿಂಗಪ್ಪ ಹಾಲಗಿ, ಗುಮಾಸ್ತ ಪ್ರಸನ್ನ ಜಿ. ಇವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು.



ತಡರಾತ್ರಿ ಕಿತ್ತೂರು ತಾಲ್ಲೂಕಿನಾದ್ಯಂತ ಈ ಸುದ್ದಿ ಹಬ್ಬಿದ್ದು, ಇದರಿಂದ ಆಘಾತಕ್ಕೆ ಒಳಗಾಗಿ ಬಾಪುಸಾಹೇಬ ಇನಾಮದಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.



ಇನ್ನು ಕಿತ್ತೂರು ತಹಶೀಲ್ದಾರ ಮತ್ತು ಗುಮಾಸ್ತರನ್ನು ಲೋಕಾಯುಕ್ತ ಪೊಲೀಸರು ಬೆಳಗಾವಿಗೆ ಕರೆತಂದಿದ್ದಾರೆ. ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಆರೋಪಿಗಳ ವೈದ್ಯಕೀಯ ತಪಾಸಣೆ ನಡೆಸಿದ ಬಳಿಕ ಲೋಕಾಯುಕ್ತ ಕೋರ್ಟ ನ್ಯಾಯಾಧೀಶರ ಮನೆಗೆ ಆರೋಪಿತರನ್ನು ಕರೆದೊಯ್ಯಲಾಗಿದೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಮಿತ ಶಾ ಭೇಟಿ : ಬೆಳಗಾವಿ ವಿಮಾನ ನಿಲ್ದಾಣದ ಸುತ್ತ 2 ಕಿ.ಮೀ. ‘ರೆಡ್ ಝೋನ್–ನೋ ಫ್ಲೈ ಝೋನ್’ಗಣೇಶ ಮೆರವಣಿಗೆ ವೇಳೆ ಮಸೀದಿ, ಮದರಸಾ ಮೇಲೆ ಕಲ್ಲುತೂರಾಟ ಆರೋಪಯುಪಿಐ ಶುಲ್ಕಕ್ಕೆ ಅಖಿಲೇಶ ಯಾದವ ಆಕ್ರೋಶದೇಶದ ಇಂಧನ ಭದ್ರತೆ ಕಾಪಾಡಲು ಬದ್ಧಈಶ್ವರಪ್ಪ, ಯತ್ನಾಳ ಅವರನ್ನು ಬಿಜೆಪಿಗೆ ಮರಳಿ ಕರೆತರಬೇಕು: ನಿರಾಣಿ₹50 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಧಾರವಾಡ ತಹಶೀಲ್ದಾರಜಾಗತಿಕ ಚಿಪ್ ಉತ್ಪಾದನೆಯ ವಿಶ್ವಾಸಾರ್ಹ ಕೇಂದ್ರವಾಗುತ್ತಿದೆ ಭಾರತ: ಮೋದಿಬರಪೀಡಿತ ಪಟ್ಟಿಗೆ ಮತ್ತೂ 23 ತಾಲೂಕು; ಒಟ್ಟು 124ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರುಗನ್ ತೋರಿಸಿ ಬೆದರಿಸಿ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ: ಮಾಜಿ ಶಾಸಕ ಸೇರಿ ಇಬ್ಬರ ವಿರುದ್ಧ ಪ್ರಕರಣ