LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಮೌಂಟ್‌ ಎವರೆಸ್ಟ ಇಳಿಯುವಾಗ ಇಬ್ಬರು ಭಾರತೀಯ ಪರ್ವತಾರೋಹಿಗಳ ಸಾವು

ಕಠ್ಮಂಡು, ಮೇ 22 : ವಿಶ್ವದ ಅತಿ ಎತ್ತರದ ಮೌಂಟ್‌ ಎವರೆಸ್ಟ ಶಿಖರ ಏರಿ ತಮ್ಮ ಕನಸು ನನಸಾಗಿಸಿಕೊಂಡಿದ್ದ ಇಬ್ಬರು ಭಾರತೀಯ ಪರ್ವತಾರೋಹಿಗಳು ಇಳಿಯುವ ವೇಳೆ ಸಾವನ್ನಪ್ಪಿರುವ ದುರ್ಘಟನೆ ನೇಪಾಳದಲ್ಲಿ ನಡೆದಿದೆ.

ಮೃತರನ್ನು ಅರುಣ ಕುಮಾರ ತಿವಾರಿ ಮತ್ತು ಸಂದೀಪ ಅರೆ ಎಂದು ಗುರುತಿಸಲಾಗಿದೆ. ತೀವ್ರ ಆಯಾಸವೇ ಸಾವಿಗೆ ಕಾರಣ ಎಂದು ಹೇಳಲಾಗಿದೆ.

ನೇಪಾಳದ ಯಾತ್ರೆ ನಿರ್ವಾಹಕರ ಸಂಘದ ಪ್ರಧಾನ ಕಾರ್ಯದರ್ಶಿ ರಿಷಿ ಭಂಡಾರಿ ಮಾಹಿತಿ ನೀಡಿ, ಶಿಖರ ಇಳಿಯುವಾಗ ಇಬ್ಬರೂ ತೀವ್ರ ದಣಿವಿನಿಂದ ಬಳಲುತ್ತಿದ್ದರು. ಮಾರ್ಗದರ್ಶಕರು ಅವರನ್ನು ರಕ್ಷಿಸಲು ಸಾಕಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.

ಸಂದೀಪ ಅರೆ ಬುಧವಾರ ಎವರೆಸ್ಟ ಶಿಖರ ತಲುಪಿದ್ದರೆ, ಅರುಣ ಕುಮಾರ ತಿವಾರಿ ಗುರುವಾರ ಸಂಜೆ ಸುಮಾರು 5.30ರ ವೇಳೆಗೆ ಶಿಖರ ಏರಿದ್ದರು. ಮಾರ್ಗದರ್ಶಕರು ಕೊನೆಯವರೆಗೂ ರಕ್ಷಣಾ ಕಾರ್ಯ ಮುಂದುವರಿಸಿದರೂ ಇಬ್ಬರನ್ನೂ ಉಳಿಸಲಾಗಲಿಲ್ಲ ಎಂದು ರಿಷಿ ಭಂಡಾರಿ ಹೇಳಿದ್ದಾರೆ.

ಸಂದೀಪ್‌ ಅರೆ ಗುರುವಾರ ಮೃತಪಟ್ಟಿದ್ದು, ಅರುಣ ಕುಮಾರ ತಿವಾರಿ ಯಾವ ಸಮಯದಲ್ಲಿ ಸಾವನ್ನಪ್ಪಿದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಬುಧವಾರ ಒಂದೇ ದಿನದಲ್ಲಿ 274 ಪರ್ವತಾರೋಹಿಗಳು 8,848.86 ಮೀಟರ್‌ ಎತ್ತರದ ಎವರೆಸ್ಟ ಶಿಖರ ಏರಿದ್ದು, ಇದು ಹೊಸ ದಾಖಲೆಯಾಗಿದೆ. ಆ ತಂಡದಲ್ಲಿ ಸಂದೀಪ್‌ ಅರೆ ಮತ್ತು ಅರುಣ ಕುಮಾರ ತಿವಾರಿ ಕೂಡ ಸೇರಿದ್ದರು.

ಇನ್ನಿಬ್ಬರು ಭಾರತೀಯ ಪರ್ವತಾರೋಹಿಗಳಾದ ತುಳಸಿ ರೆಡ್ಡಿ ಪಲ್ಪುನುರಿ ಮತ್ತು ಅಜಯ ಪಾಲ್‌ ಸಿಂಗ್‌ ಧಲಿವಾಲ್‌ ಸಹ ಯಶಸ್ವಿಯಾಗಿ ಶಿಖರ ತಲುಪಿದ್ದರು. ಗುರುವಾರ ಭಾರತದ ಲಕ್ಷ್ಮಿಕಾಂತ ಮಂಡಲ್‌ ಕೂಡ ವಿಶ್ವದ ಅತಿ ಎತ್ತರದ ಶಿಖರ ಏರಿದ ಸಾಧನೆ ಮಾಡಿದರು.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೀಟ್‌-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಮರುಕಳಿಸದು : ಮತ್ತೆ ಭರವಸೆ ನೀಡಿದ ಧರ್ಮೇಂದ್ರ ಪ್ರಧಾನನೀಟ್‌-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ : ಧರ್ಮೇಂದ್ರ ಪ್ರಧಾನ ರಾಜೀನಾಮೆಗೆ ಕಾಕ್ರೋಚ್‌ ಜನತಾ ಪಕ್ಷದ ಆನ್‌ಲೈನ್‌ ಅಭಿಯಾನಮೌಂಟ್‌ ಎವರೆಸ್ಟ ಇಳಿಯುವಾಗ ಇಬ್ಬರು ಭಾರತೀಯ ಪರ್ವತಾರೋಹಿಗಳ ಸಾವುರಾಷ್ಟ್ರೀಯ ಭದ್ರತೆ ಕಾರಣ ಕಾಕ್ರೋಚ್‌ ಜನತಾ ಪಕ್ಷ ಎಕ್ಸ ಖಾತೆ ನಿರ್ಬಂಧಕಾಕ್ರೋಚ್‌ ಹೀಗೆ ಮಾವು ತಿನ್ನುತ್ತವೆ ಎಂದು ಪ್ರಧಾನಿ ಮೋದಿ ವಿರುದ್ಧ ನಟ ಪ್ರಕಾಶ ವ್ಯಂಗ್ಯ ವಿಡಿಯೋ ವೈರಲ್‌ದ್ವೇಷ ರಾಜಕಾರಣ ಬೇಡ; ಭಾರತೀಯ ಕುಸ್ತಿ ಒಕ್ಕೂಟಕ್ಕೆ ದಿಲ್ಲಿ ಹೈಕೋರ್ಟ ತೀವ್ರ ತರಾಟೆ : ವಿನೇಶ ಫೋಗಟ್‌ ಅನರ್ಹತೆಗೆ ನಿರ್ಧಾರಕ್ಕೆಬೆಂಗಳೂರಿನಿಂದ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ಬೆಂಕಿ; 180 ಪ್ರಯಾಣಿಕರು ಸುರಕ್ಷಿತತಲೆಗೆ ಗುಂಡು ಹಾರಿಸಿಕೊಂಡು ಕೆಎಲ್ಇ ಆಸ್ಪತ್ರೆಯ ಖ್ಯಾತ ವೈದ್ಯ ಡಾ.ದಿನೇಶ ಭಟ್ಕಳ ಆತ್ಮಹತ್ಯೆಇರಾನ್‌ ಯುದ್ಧದ ಕಾರಣ ಪುತ್ರನ ಮದುವೆಗೂ ಹೋಗಲಾಗುತ್ತಿಲ್ಲ: ಟ್ರಂಪ್‌ಜೂನ್‌ 18ರಂದು 24 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ : ಕರ್ನಾಟಕ ಸೇರಿ 10 ರಾಜ್ಯಗಳಲ್ಲಿ ಮತದಾನ