ಬೆಳಗಾವಿ : ಇಲ್ಲಿನ ರಾಣಿ ಚನ್ನಮ್ಮ ಕಿರು ಮೃಗಾಲಯದಿಂದ ಯಾವುದೇ ಹುಲಿಗಳು ಕಾಣೆಯಾಗಿಲ್ಲ. ಆದರೆ ರಾಣಿ ಚನ್ನಮ್ಮ ವಿವಿಯ ಹಿಂಬದಿಯ ಗುಡ್ಡದಲ್ಲಿ ಕಳೆದ ನಾಲ್ಕು ದಿನದ ಹಿಂದೆ ಆನೆ ಕಾಣಿಸಿಕೊಂಡಿತ್ತು ಎಂದು ರಾಣಿ ಚನ್ನಮ್ಮ ಕಿರುಮೃಗಾಲಯದ ಕ್ಯೂರೆಟರ್ ಪವನ ಕುರನಿಂಗ ತಿಳಿಸಿದ್ದಾರೆ.
ಬುಧವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಮೃಗಾಲಯದಲ್ಲಿರುವ ಕನಿಷ್ಕಾ, ಕೃಷ್ಣಾ ನಿತ್ಯಾ ಮೂರು ಹುಲಿಗಳು ಸುರಕ್ಷಿತವಾಗಿವೆ. ಭೂತರಾಮನಹಟ್ಟಿಯ ಸೇರಿದಂತೆ ಸುತ್ತಮುತ್ತಲಿನ ಜನರು ಯಾವುದೇ ಆತಂಕ ಪಡುವ ಅಗತ್ಯ ಇಲ್ಲ . ಕಿರು ಮೃಗಾಲಯದ ಎಲ್ಲ ಪ್ರಾಣಿಗಳು ಸುರಕ್ಷಿತವಾಗಿದ್ದು ಯಾವುದೇ ಪ್ರಾಣಿ ತಪ್ಪಿಸಿಕೊಂಡಿಲ್ಲ ಎಂದರು.
ಸುಳ್ಳು ಸುದ್ದಿ ಹರಿಬಿಟ್ಟಿದ್ದ ಖಾಸಗಿ ಕಾಲೇಜಿನ ಕಾವಲುಗಾರನಿಗೆ ಕರೆಸಿ ಇನ್ನೊಂದು ಬಾರಿ ಈ ರೀತಿ ಮಾಡಿದರೆ ಎಚ್ಚರಿಕೆ ಎಂದರು.

