ನಕಲಿ ದಾಖಲಾತಿಗಳ ಸೃಷ್ಟಿಸಿ 2 ಕೋಟಿ ಆಸ್ತಿ ಕಬಳಿಸಲು ಯತ್ನ: ಹುಕ್ಕೇರಿ ಉಪ ನೋಂದಣಾಧಿಕಾರಿ ಸೇರಿ 9 ಜನ ಪೊಲೀಸರ ವಶಕ್ಕೆ

A B Dharwadkar
ನಕಲಿ ದಾಖಲಾತಿಗಳ ಸೃಷ್ಟಿಸಿ 2 ಕೋಟಿ ಆಸ್ತಿ ಕಬಳಿಸಲು ಯತ್ನ: ಹುಕ್ಕೇರಿ ಉಪ ನೋಂದಣಾಧಿಕಾರಿ ಸೇರಿ 9 ಜನ ಪೊಲೀಸರ ವಶಕ್ಕೆ

ಬೆಳಗಾವಿ : ನಕಲಿ ದಾಖಲಾತಿಗಳ ಸೃಷ್ಟಿಸಿ 2 ಕೋಟಿ ಆಸ್ತಿ ಕಬಳಿಸಲು ಯತ್ನ ಹುಕ್ಕೇರಿ ಉಪ ನೋಂದಣಾಧಿಕಾರಿ ಸೇರಿ 9 ಆರೋಪಿಗಳನ್ನು ಹುಕ್ಕೇರಿ ಪೊಲೀಸರು ಬಂಧಿಸಿದ್ದಾರೆ ಎಂದು ಬೆಳಗಾವಿ ಎಸ್‌ ಪಿ ಕೆ. ರಾಮರಾಜನ್ ಮಾಹಿತಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ವಿಷಯ ತಿಳಿಸಿದ ಅವರು, ಶಿವಾನಂದ ಮಾರುತಿ ಕುದ್ದೂರಿ. ಸಾ।। ಕುರಣಿ, ಇವರು ಹುಕ್ಕೇರಿ ಠಾಣೆಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದರು. ಆರೋಪಿತರಾದ 1] ರೇಣುಕಾ ಶಂಕರ ಮಾಳಿ. 2] ಶಿವರುದ್ರ ಪ್ರಧಾನಿ ಕುದ್ದೂರಿ, 3] ಕಾಶವ್ವಾ ಶಿವರುದ್ರ ಕುದ್ದೂರಿ, 4] ನೀಲಕಂಠ ಶೇಟ್ಟೆಪ್ಪಾ ಮುದುಪಾಕಿ, 5] ಮೈತ ಅಡಿವೆಪ್ಪಾ ಶೆಟ್ಟೆಪ್ಪಾ ಮುದುಪಾಕಿ, 6] ಸಿದ್ದಯ್ಯಾ ನಿರುಪಾದಯ್ಯಾ ಹಿರೇಮಠ, ಸಾ।। ಎಲ್ಲರೂ ಕುರುಣಿ. 7] ಆನಂದ ಎಮ್ ದಡ್ಡಿಮನಿ, 8] ಉಪನೊಂದಣಿ ಅಧಿಕಾರಿಗಳು ಹುಕ್ಕೇರಿ, ಇವರು ಸಂಗನಮತ ಮಾಡಿಕೊಂಡು ಪಿರ್ಯಾದಿ ಹಾಗೂ ಪಿರ್ಯಾದಿಯ ಬಾಹುಬಂದಿರ ಆಸ್ತಿಯನ್ನು ಕಬಳಿಸಲು ಅವರಿಗೆ ಆರ್ಥಿಕ ನಷ್ಟವನ್ನುಂಟು ಮಾಡುವ ಉದ್ದೇಶದಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂದು ಮಾಹಿತಿ ತಿಳಿಸಿದ್ದಾರೆ.
21-05-2025. ಕುರಣಿ ಗ್ರಾಮ ಹದ್ದಿ ಜಮೀನ ರಿ.ಸ.ನಂ: 189/4 ಹಾಗೂ ದಿ|| 12-06-2025 ರಂದು ರಿ.ಸ.ನಂ: 183/30ಬಿ, ಮತ್ತು 183/13ಅ ನೇದ್ದವುಗಳಿಗೆ ಸಂಬಂದಿಸಿದಂತೆ ಹುಕ್ಕೇರಿ ಉಪನೊಂದಣಾಧಿಕಾರಿಗಳ ಕಛೇರಿಯಲ್ಲಿ ಇದರಲ್ಲಿ ಪಿರ್ಯಾದಿ ಹಾಗೂ ಪಿರ್ಯಾದಿಯ ಬಾಹುಬಂದರ ಹೆಸರಿನ ಮುಂದೆ ಆರೋಪಿತರು ಪೋಟೋಗಳನ್ನು ತೆಗೆಯಿಸಿಕೊಂಡು ಅವರ ತೊಟ್ಟಿ ಸಹಿಗಳನ್ನು ಮಾಡಿ ಬಿನ್ ಕಬ್ಬಾ ನೊಂದ ಕರಾರಪತ್ರಗಳನ್ನು ತಯಾರಿಸಿ ಪಿರ್ಯಾದಿಗೆ ಹಾಗೂ ಪಿರ್ಯಾದಿಯ ಬಾಹುಬಂದರಿಗೆ ಮೋಸ ಮಾಡಿರುವ ಬಗ್ಗೆ ಯಮಕನಮರಡಿ ಪೊಲೀಸ ಠಾಣೆ ಯಲ್ಲಿ ದೂರು ದಾಖಲಾಗಿದೆ ಎಂದು ತಿಳಿಸಿದ್ದಾರೆ.

ಅಪರಾಧ ಸಂಖ್ಯೆ: 26/2026 ಕಲಂ: 318(2), 319(2), 336(2), 336(3), 338, 340(2), 2. 3(6) 2.2.2-2023 ಇದರಲ್ಲಿನ ಆರೋಪಿತರಾದ ನೀಲಕಂಠ ಶೆಟ್ಟೆಪ್ಪಾ ಮುದಪಾಕಿ. ಇವರ ಮನೆಯ ಮೇಲೆ ದಾಳಿ ಮಾಡಿ 09 ನಕಲಿ ಆಧಾರ ಕಾರ್ಡಗಳು 03 ನಕಲಿ ಪಾನ ಕಾರ್ಡಗಳು ಹಾಗು 01 ನಕಲಿ ವೋಟರ ಐ.ಡಿ.ಯನ್ನು ಹೀಗೆ ಒಟ್ಟು 13 ನಕಲಿ ದಾಖಲಾತಿಗಳನ್ನೊಳಗೊಂಡಂತೆ 22 ದಾಖಲಾತಿಗಳನ್ನು ಹಾಗು ಆರೋಪಿತನಾದ ಅಶೋಕ ರತ್ನಪ್ಪಾ ಸೂರ್ಯವಂಶಿ ಇವನ ಸೂರ್ಯವಂಶಿ ಫೋಟೊ ಸ್ಟುಡಿಯೋ ಮೇಲೆ ದಾಳಿ ಮಾಡಿ ನಕಲಿ ದಾಖಲಾತಿಗಳನ್ನು ತಯಾರಿಸಲು ಉಪಯೋಗಿಸಿದ 1 ಕಂಪ್ಯೂಟರ, 1 ಲ್ಯಾಪಟಾಪ, 1 ಕ್ಯಾಮರಾ, 2 ಪ್ರಿಂಟರ ಹಾಗು 1 ಲ್ಯಾಮಿನೇಶನ ಮಶೀನ ಒಳಗೊಂಡಂತೆ ಒಟ್ಟು 06 ಸಾಮಗ್ರಿಗಳನ್ನು ವಶಕ್ಕೆ ಪಡೆದುಕೊಳ್ಳಾಗಿದೆ.
ಸದರಿ ಇಬ್ಬರು ಆರೋಪಿತರಿಗೆ ಹಾಗು ಇನ್ನೊಬ್ಬ ಆರೋಪಿತನಾದ ವಿಜಯ ಶಿವಶಂಕರ ಮಠದ ಇವರಿಗೆ ದಿನಾಂಕ: 28/01/2026 ರಂದು ದಸ್ತಗೀರ ಮಾಡಿ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು ಇರುತ್ತದೆ. ಇದರಲ್ಲಿ ಪ್ರಕರಣ ದಾಖಲಾಗಿದ್ದರಿಂದ ಪರಾರಿಯಾಗಿದ್ದ ಆರೋಪಿತರಾದ ಉಪನೊಂದಣಿ ಅಧಿಕಾರಿಯಾದ ಮಡಿವಾಳಯ್ಯಾ ಬಸವರಾಜ ಬಾನಿಮಠ ಹಾಗು ಆನಂದ ಮಹಾದೇವ ದಡ್ಡಿಮನಿ ಇವರು ನ್ಯಾಯಾಲಯ ನಿರೀಕ್ಷಣಾ ಜಾಮೀನನ್ನು ಪಡೆದುಕೊಂಡು ಬಂದು ದಿನಾಂಕ: 08/02/2026 ರಂದು ಯಮಕನಮರಡಿ ಪೊಲೀಸ ಠಾಣೆಯಲ್ಲಿ ಹಾಜರಾಗಿದ್ದು ಇರುತ್ತದೆ. ಇದರಲ್ಲಿನ ಆರೋಪಿತರಾದ ನೀಲಕಂಠ ಶೆಟ್ಟೆಪ್ಪಾ ಮುದಪಾಕಿ. ಇವನ ಮನೆಗೆ ಹೋಗಿ ವಿಜಯ ಶಿವಶಂಕರ ಮಠದ ಮತ್ತು ಅಶೋಕ ರತ್ನಪ್ಪಾ ಸೂರ್ಯವಂಶಿ ಇವರಿಗೆ ದಿನಾಂಕ: 28/01/2026 ರಂದು ದಸ್ತಗೀರ ಮಾಡಿ ಆರೋಪಿತರು ಕೃತ್ಯಕ್ಕೆ ಉಪಯೋಗಿಸಿದ ನಕಲಿ ಆಧಾರ ಕಾರ್ಡ ನಕಲಿ ಪಾನ ಕಾರ್ಡಗಳನ್ನು ಆರೋಪಿತನಾದ ನೀಲಕಂಠ ಶೆಟ್ಟೆಪ್ಪಾ ಮುದಪಾಕಿ ಇವನಿಂದ ಹಾಗು ನಕಲಿ ದಾಖಲಾತಿಗಳನ್ನು ತಯಾರಿಸಲು ಉಪಯೋಗಿಸಿದ ಕಂಪ್ಯೂಟರ. ಲ್ಯಾಪಟಾಪ. ಕ್ಯಾಮರಾ, ಪ್ರಿಂಟರ ಹಾಗು ಲ್ಯಾಮಿನೇಶನ ಮಶೀನಗಳನ್ನು ಆರೋಪಿತನಾದ ಅಶೋಕ ರತ್ನಪ್ಪಾ ಸೂರ್ಯವಂಶಿ ಇವನ ಕಡೆಯಿಂದ ವಶಕ್ಕೆ ಪಡೆದುಕೊಂಡಿದ್ದು ಇರುತ್ತದೆ. ಹಾಗು ಇದರಲ್ಲಿ ಪ್ರಕರಣ ದಾಖಲಾಗಿದ್ದರಿಂದ ಪರಾರಿಯಾಗಿದ್ದ ಆರೋಪಿತರಾದ ಉಪನೊಂದಣಿ ಅಧಿಕಾರಿಯಾದ ಮಡಿವಾಳಯ್ಯಾ ಬಸವರಾಜ ಬಾನಿಮಠ ಹಾಗು ಆನಂದ ಮಹಾದೇವ ದಡ್ಡಿಮನಿ ಇವರು ಮಾನ್ಯ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನನ್ನು ಪಡೆದುಕೊಂಡು ಬಂದು ದಿನಾಂಕ: 08/02/2026 ರಂದು ಯಮಕನಮರಡಿ ಪೊಲೀಸ ಠಾಣೆಯಲ್ಲಿ ಹಾಜರಾಗಿದ್ದಾರೆ ಎಂದು ತಿಳಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.