ಅಳ್ನಾವರ, ಡಿ. 20: ಧಾರವಾಡ ಗ್ರಾಮೀಣ ಉಪವಿಭಾಗ ವ್ಯಾಪ್ತಿಯಲ್ಲಿನ 110/11 ಕೆವಿ ಅಳ್ನಾವರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿರುವ ಹಿನ್ನೆಲೆಯಲ್ಲಿ ಸೋಮವಾರ, ದಿ. 22.12.2025 ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕೆಳಕಂಡ 11 ಕೆವಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ವಿದ್ಯುತ್ ನಿಲುಗಡೆಯಾಗುವ ಪ್ರದೇಶಗಳು:
ಅಳ್ನಾವರ ಪಟ್ಟಣ, ಬೆಣಚಿ ಡೋರಿ, ಗುಡೆಬೈಲ್, ದೊಪೆನಹಟ್ಟಿ, ಹಳ್ಳಿಗೇರಿ, ಕಡಬಗಟ್ಟಿ, ಹಿಂಡಸಗೇರಿ, ಅವರತಬೈಲ್, ಬೊಡಳ್ಳಿ, ಗುಂಡಳ್ಳಿ, ಒದಗೇರಾ, ಬಾಲಗೇರಿ, ಬಾಳಗುಂದ, ಚುಂಚವಾಡ, ಲಿಂಗನಮಠ, ಹೊಸ ಲಿಂಗನಮಠ, ಪಾಲಗೇರಾ, ಅರವಟಗಿ, ಅಂಬೋಳಿ, ಕುಂಬಾರಕೊಪ್ಪ, ಬಸವೇಶ್ವರನಗರ, ಹೊನ್ನಾಪುರ, ಶಿವನಗರ, ಕಂಬಾರಗಣವಿ ಹಾಗೂ ವ್ಯಾಪ್ತಿಯಲ್ಲಿರುವ ಸುತ್ತಮುತ್ತಲಿನ ಎಲ್ಲಾ ಗ್ರಾಮ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.



