ಹಾವೇರಿ:ನಗರದ ಹೊರವಲಯದಲ್ಲಿರುವ ದೇವಗಿರಿಯ ಸರ್ಕಾರಿ ಇಂಜನಿಯರಿಂಗ್ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರ ಹಾಸ್ಟೆಲ್ ಮೂಲಭೂತ ಸೌಕರ್ಯ ಕಲ್ಪಿಸಲು ಹಾಗೂ ವಿದ್ಯಾರ್ಥಿಗಳು ಆಹಾರ ಸ್ವೀಕರಿಸಿ ಅಶ್ವಸ್ಥರಾಗಿರುವ ಘಟನೆಗೆ ಸಂಭಂದಿಸಿದಂತೆ ABVP ಇಂದು ಇಂಜನಿಯರಿಂಗ್ ಕಾಲೇಜು ಎದುರುಗಡೆ ಪ್ರತಿಭಟನೆ ನಡೆಸಿತು .
ಎಬಿವಿಪಿ ರಾಜ್ಯ ಸಹಕಾರ್ಯದರ್ಶಿ ಅಭಿಷೇಕ್ ದೊಡ್ಡಮನಿ ಮಾತನಾಡಿ ದೇವಗೇರಿಯಲ್ಲಿರುವ ಇಂಜನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯರಿಗೆ ವಸತಿ ನಿಲಯ ಮೂಲಭೂತ ಸೌಕರ್ಯ ಇರುವುದಿಲ್ಲ. ಮತ್ತು ವಿದ್ಯಾರ್ಥಿನಿಯರಿಗೆ ವಾರ್ಡನ್ ಹಾಗೂ ವಾಚ್ ಮ್ಯಾನ್ ಇಲ್ಲದೇ ಹಾಸ್ಟೇಲ್ ನಡೆಸುತ್ತಿರುವ ಕಾಲೇಜಿನ ಪ್ರಾಂಶುಪಾಲರೇ ಇದರ ನೇರ ಹೊಣೆಗಾರರಿರುತ್ತಾರೆ. ವಿದ್ಯಾರ್ಥಿನಿಯರಿಗೆ ಮೇಸ್‌ನಿಂದ ಊಟ ತರಿಸಿ ನೀಡುತ್ತಿರುತ್ತಾರೆ ನಿನ್ನೆಯ ದಿವಸ ವಿದ್ಯಾರ್ಥಿನಿಯರು ಮೇಸ್‌ನಿಂದ ತರಿಸಿರುವ ಆಹಾರ ಸೇವಿಸಿ ಅಶ್ವಸ್ಥರಾಗಿರುವುದು ಕಂಡುಬಂದಿದ್ದು, ಈ ಎಲ್ಲಾ ಸಮಸ್ಯೆಗಳಿಗೆ ಕಾಲೇಜಿನ ಪ್ರಾಂಶುಪಾಲರು ನೇರ ಹೊಣೆಗಾರರಾಗಿರುತ್ತಾರೆ. ಇದರ ಬಗ್ಗೆ ಪ್ರಾಂಶುಪಾಲರನ್ನು ವಿಚಾರಿಸಿದರೆ ಇವರು ಇದರ ಬಗ್ಗೆ ಉಡಾಫೆ ಉತ್ತರವನ್ನು ನೀಡುತ್ತಾರೆ. ಇಂತಹ ಪ್ರಾಂಶುಪಾಲರನ್ನು ಅಮಾನತ್ ಮಾಡಬೇಕಾಗಿ ತಮ್ಮಲ್ಲಿ ಎಬಿವಿಪಿ ವಿನಂತಿಸುತ್ತೇನೆ. ಇಲ್ಲವಾದಲ್ಲಿ ಮುಂದಿನ ದಿನಮಾನಗಳಲ್ಲಿ ಉಗ್ರ ಹೋರಾಟ ಮಾಡುವ ತೀರ್ಮಾನವನ್ನು ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಸಿದರು .
ಈ ಸಂದರ್ಭದಲ್ಲಿ ಎಬಿವಿಪಿಯ ನಗರ ಕಾರ್ಯದರ್ಶಿ ಸಾಗರ ಪೋಲಿಸಗೌಡ್ರ, ದಿವ್ಯಾ, ಭಾವನಾ, ಸ್ನೇಹಾ, ಲತಾ, ಅಶ್ವಿನಿ, ಸಂಗೀತಾ, ಯತಿಶ, ಕೃಷ್ಣಾ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹಾವೇರಿಯಲ್ಲಿ ಎಬಿವಿಪಿ ಇಂದ ಪ್ರತಿಭಟನೆ



