ಗೋಕಾಕ, ಜನವರಿ 13: ಜಿಲ್ಲೆಯ ಖ್ಯಾತ ಗುತ್ತಿಗೆದಾರ ಮತ್ತು ಇಂಜನೀಯರರಾದ ರವಿ ಡಿ. ಕಿತ್ತೂರ ಅವರ ತಂದೆ ದುಂಡಪ್ಪಾ ವೀ. ಕಿತ್ತೂರ ಅವರು ಸೋಮವಾರ ದಿ. 13ರಂದು ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.
ಸುದೀರ್ಘ ಕಾಲ ಪತ್ರಿಕಾ ವಿತರಕರಾಗಿದ್ದ ಅವರು ಮೂವರು ಪುತ್ರರು, ಮೊಮ್ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ದಿವಂಗತರ ಅಂತ್ಯಕ್ರಿಯೆ ಸೋಮವಾರ ಸಾಯಂಕಾಲ 6 ಗಂಟೆಗೆ ಗೋಕಾಕದ ಜ್ಞಾನ ಮಂದಿರ ಸಮೀಪ ಇರುವ ರುದ್ರಭೂಮಿಯಲ್ಲಿ ನಡೆಯಲಿದೆ.