ಹಾವೇರಿ:ನಗರದ KSRTC ಬಸ್ ನಿಲ್ದಾಣದಲ್ಲಿ ದಿಢೀರನೆ ಬಸ್ಸುಗಳನ್ನು ತಡೆದು,ಸರಕಾರಿ ನೌಕರರು & ವಿದ್ಯಾರ್ಥಿಗಳು ಸೇರಿ ಪ್ರತಿಭಟನೆ ನಡೆಸಿದರು.
ಬಸ್ಸುಗಳು ಸರಿಯಾದ ಸಮಯಕ್ಕೆ ಬರದ ಹಿನ್ನೆಲೆ ದಿಢೀರನೆ ಪ್ರತಿಭಟನೆಯನ್ನು ಕೈಗೊಂಡರು.ಹಾವೇರಿ ಟು ಹಾನಗಲ್ ಮಾರ್ಗದ ಸರಕಾರಿ ಬಸ್ಗಳ ನಿತ್ಯ ಸಮಸ್ಯೆಗಾಗಿ ಸಾರಿಗೆ ಅಧಿಕಾರಿಗಳ ವಿರುದ್ಧ ರೊಚ್ಚಿಗೆದ್ದ ನೌಕರರು & ಸ್ಟೂಡೆಂಟ್ಸ್.
ಬಸ್ ನಿಲ್ದಾಣದಿಂದ ಬಸ್ಗಳು ಹೊರ ಹೋಗದಂತೆ ತಡೆದು ಪ್ರೊಟೆಸ್ಟ್.
ಕೆಲಕಾಲ ಹಾವೇರಿ KSRTC ಬಸ್ ನಿಲ್ದಾಣದಲ್ಲೇ ನಿಂತಿರೋ ಬಸ್ಗಳು..
ಈ ಹಿನ್ನೆಲೆಯಲ್ಲಿ ಬಸ್ ನಿಲ್ದಾಣದ ಸುತ್ತಮುತ್ತ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಯಿತು.
ಸ್ಥಳಕ್ಕೆ ಅಧಿಕಾರಿಗಳು ಬರುವಂತೆ ಪಟ್ಟು ಹಿಡಿದ ಪ್ರತಿಭಟನಾಕಾರರು. ಪ್ರತಿಭಟನಾಕಾರರ ಮನವೊಲಿಸಲು ಪೊಲೀಸರು ಹರಸಾಹಸಪಟ್ಟರು. ನಂತರ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂದೆ ತೆಗೆದುಕೊಂಡರು.



