ಚೆನ್ನೈ: ತಮಿಳುನಾಡು ತೆರಿಗೆ ರೂಪದಲ್ಲಿ ಕೇಂದ್ರ ಸರಕಾರಕ್ಕೆ ನೀಡುತ್ತಿರುವ ಹಣದಲ್ಲೇ ಉತ್ತರ ಪ್ರದೇಶ ಜೀವಿಸುತ್ತಿದೆ ಎಂದು ತಮಿಳುನಾಡು ಕೈಗಾರಿಕಾ ಸಚಿವ ಟಿಆರ್ಬಿ ರಾಜಾ ಹೇಳಿದ್ದಾರೆ. ಪಿಎಂಕೆ ನಾಯಕ ಅನ್ಬುಮಣಿ ರಾಮದಾಸ್ “ತಮಿಳುನಾಡಿಗಿಂತ ಉತ್ತರ ಪ್ರದೇಶ ಹೆಚ್ಚು ಅಭಿವೃದ್ಧಿ ಹೊಂದಿದೆ’ ಎಂದು ಈ ಹಿಂದೆ ಹೇಳಿದ್ದರು.
ಈ ಸಂಬಂಧ ರಾಜಾ ಅವರನ್ನು ಸುದ್ದಿಗಾರರು ಪ್ರಶ್ನಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ರಾಜಾ, “ಉತ್ತರ ಪ್ರದೇಶಕ್ಕೆ ಎಲ್ಲಿಂದ ಹಣ ಬರುತ್ತಿದೆ? ಇದು ಆಂತರಿಕ ಅಭಿವೃದ್ಧಿಯೇ?’ ಎಂದಿದ್ದಾರೆ. ಜತೆಗೆ ಉತ್ತರ ಭಾರತದ ಮಹಿಳೆಯರ ಗುರುತು ಆಕೆಯ ಪತಿಯ ಉದ್ಯೋಗದಿಂದ ಆಗುತ್ತದೆ. ಆದರೆ ತಮಿಳುನಾಡಿನಲ್ಲಿ ಆಕೆಯ ವಿದ್ಯಾಭ್ಯಾಸದಿಂದ ಆಗುತ್ತದೆ’ ಎಂದಿದ್ದಾರೆ.

