ಹುಬ್ಬಳ್ಳಿ : “ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿಯನ್ನು ಬಂಧಿಸಿ ವಿವಸ್ತ್ರಗೊಳಿಸಿ ಪೊಲೀಸರು ಹಲ್ಲೆ ನಡೆಸಿದ್ದಾರೆ,” ಎಂಬ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಜಾತಾ ಹಂಡಿಯ ಕರಾಳ ಮುಖ ದಿನಕ್ಕೊಂದು ಬಯಲಾಗುತ್ತಿದೆ.
ಬಂಧನದ ವೇಳೆ ಮಹಿಳಾ ಪೊಲೀಸರಿದ್ದ ವ್ಯಾನ್ ನಲ್ಲಿ ತನ್ನ ವಸ್ತ್ರ ತಾನೇ ಬಿಚ್ಚಿಕೊಂಡು ನಾಟಕವಾಡಿ, ಪೋಲೀಸರ ಮೇಲೆ ಅಪವಾದದ ಹೈಡ್ರಾಮಾ ಮಾಡಿದ್ದ ಸುಜಾತಾ ಹಂಡಿಯ ಕೆಲ ಹಳೆ ವಿಡಿಯೋಗಳು ಈಗ ಬಯಲಾಗಿವೆ. ಎರಡು ವರ್ಷಗಳ ಹಿಂದೆ ಸುಜಾತಾ ಹಂಡಿ ಹಣಕ್ಕಾಗಿ ಹನಿಟ್ರ್ಯಾಪ್ ಮಾಡಿ, ವ್ಯಕ್ತಿಯೊಬ್ಬರನ್ನು ಹಿಗ್ಗಾ ಮುಗ್ಗಾ ಥಳಿಸಿ ಬೆದರಿಕೆ ಹಾಕಿದ್ದ ವಿಡಿಯೋ ವೈರಲ್ ಆಗಿದೆ.
ಧಾರವಾಡದ ತುಕಾರಾಮ್ ಎಂಬುವವರನ್ನು ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಿದ್ದ ಸುಜಾತಾ ಹಂಡಿ, ಆತನನ್ನು ಮೂರು ದಿನಗಳ ಕಾಲ ಕೂಡಿ ಹಾಕಿ ಕೈಯಲ್ಲಿ ಮಚ್ಚು ಹಿಡಿದು ಬೆದರಿಕೆ ಹಾಕಿದ್ದಾಳೆ. ಅಷ್ಟೇ ಅಲ್ಲ ನೈಲಾನ್ ಹಗ್ಗದಿಂದ ಹಿಗ್ಗಾ ಮುಗ್ಗಾ ಮನಬಂದಂತೆ ಥಳಿಸಿದ್ದಾಳೆ. ಆತ ತನ್ನನ್ನು ಬಿಟ್ಟುಬಿಡುವಂತೆ ಕಾಲು ಹಿಡಿದು ಕೇಳಿಕೊಂಡರೂ ಹೊಡೆಯುವುದನ್ನು ನಿಲ್ಲಿಸಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಸುಜಾತಾ ಹಂಡಿಯ ಮೃಗೀಯ ವರ್ತನೆ ಬಯಲಾಗಿದೆ.



