ನನಸಾಯ್ತು ಮೇಕಲಮರ್ಡಿ ಗ್ರಾಮಸ್ಥರ ಕನಸು

A B Dharwadkar
ನನಸಾಯ್ತು ಮೇಕಲಮರ್ಡಿ ಗ್ರಾಮಸ್ಥರ ಕನಸು

ನೇಸರಗಿ, ಸೆ. 10: ಇಲ್ಲಿಗೆ ಸಮೀಪದ ಮೇಕಲಮರ್ಡಿ ಗ್ರಾಮಸ್ಥರ ಬಹುದಿನಗಳಿಂದ ಕನಸಾಗಿ ಉಳಿದಿದ್ದ ವಾರದ ಸಂತೆಯ ಬೇಡಿಕೆಯು ಬುಧವಾರ ನೆರವೇರಿದೆ.

ಗ್ರಾಮದ ಹಿರಿಯರ ಹಾಗೂ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರ, ಸದಸ್ಯರ, ಅಭಿವೃದ್ಧಿ ಅಧಿಕಾರಿಗಳ, ಸಿಬ್ಬಂದಿ ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಪೂಜೆ ನೆರವೇರಿಸುವದರ ಮೂಲಕ ಆರಂಭವಾದ ಸಂತೆಯು ಬೆಳಿಗ್ಗೆ 7 ರಿಂದ ಮಧ್ಯಾಹ್ನ 2 ಗಂಟೆ ವರೆಗೆ ನಡೆಯಿತು.

ಈ ಸಂದರ್ಭದಲ್ಲಿ ಜನತೆಯಲ್ಲಿ ಖುಷಿ, ಸಂಭ್ರಮ ಮನೆ ಮಾಡಿತ್ತು.  ಗ್ರಾಮದ ಹಾಗೂ ಸುತ್ತಮುತ್ತಲಿನ ಜನರು, ರೈತರು, ವ್ಯಾಪಾರಸ್ಥರು ಹುರುಪು-ಹುಮ್ಮಸ್ಸಿನಿಂದ ನೂತನ ಸಂತೆಯಲ್ಲಿ ಭಾಗವಹಿಸಿದ್ದರು. ದೂರದ ಊರುಗಳಿಗೆ ತೆರಳಿ ಸಂತೆ ಮಾಡುತ್ತಿದ್ದವರು ಇಂದು ಸ್ವಂತ ಊರಲ್ಲಿ ಸಂತೆ ಮಾಡಿ ಸಂಭ್ರಮಿಸಿದರು.

ಸಂತೆ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷೆ ಶ್ರೀಮತಿ ಭಾರತಿ ತಿಗಡಿ, ಉಪಾಧ್ಯಕ್ಷ ಕಾಶೀಮ ಜಮಾದಾರ, ಸದಸ್ಯರಾದ ರೇಣುಕಾ ಕಡಕೋಳ, ಶಾಂತವ್ವ ಹುಲಮನಿ, ವಿಜಯ ಯರಡಾಲ, ರಾಜು ಹಣ್ಣಿಕೇರಿ, ಮಂಜುಳಾ ಹುಲಮನಿ, ಸುಧಾ ಹೊಸಮನಿ, ಯಲ್ಲವ್ವ ಗುಡಿ, ಶಿವಪ್ಪ ಚೋಭಾರಿ, ಚಂದ್ರಯ್ಯ ಹಿರೇಮಠ, ರೈತ ಸಂಘದ ಮುಖಂಡ ಮಹಾಂತೇಶ ಹಿರೇಮಠ, ರಘುವೀರ ಬಾಳಪ್ಪಾ ಕಡೆಟ್ಟಿ, ನೇಮಣ್ಣ ಬೆಳವಲ, ಪಾರಿಸ ಟಗರಿ, ಆಜಾದ ಸೈಯದ, ಮಹಾವೀರ ಅಲ್ಲಯ್ಯನವರ, ಅಜ್ಜಪ್ಪ ಕಮತಗಿ, ಮಹಾಂತೇಶ ಹಿರೇಮಠ, ಮಹಾಂತೇಶ ಬಡಿಗೇರ, ಬಸಯ್ಯ ಹಿರೇಮಠ, ಜ್ಞಾನದೇವ ತುಮ್ಮರಗುದ್ದಿ ಸೇರಿದಂತೆ ಮೇಕಲಮರಡಿ ಗ್ರಾಮದ ಹಿರಿಯರು, ಜನರು, ಮಹಿಳೆಯರು ಪಾಲ್ಗೊಂಡಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.