ಬೆಳಗಾವಿ : ತನ್ನ ಅನುಮತಿಯಿಲ್ಲದೆ ತವರು ಮನೆಗೆ ಹೋಗಿದ್ದ ಪತ್ನಿ ಮತ್ತು ಅವಳ ಮನೆಯಲ್ಲಿದ್ದ ಇತರ ಐವರನ್ನು ಪತಿ ಕ್ರೂರವಾಗಿ ಹಿಂಸಿಸಿದ ಘಟನೆ ಅಥಣಿ ತಾಲೂಕಿನ ತೆಲಸಂಗ ಗ್ರಾಮದಲ್ಲಿ ಜರುಗಿದೆ.
ಗಂಡನ ಮನೆಯಲ್ಲಿ ಜಗಳಕ್ಕೆ ಬೇಸತ್ತು ತವರು ಮನೆಗೆ ಹೋದ ಹೆಂಡತಿ ಹಾಗೂ ಆಕೆಯ ಕುಟುಂಬಸ್ಥರನ್ನು ಗಂಡ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಯ ಯತ್ನಿಸಿದ ಘಟನೆ ಕಳೆದ ಡಿಸೆಂಬರ್ 10 ರಂದು ನಡೆದಿದೆ.
ಗಂಡ ಭೀಮಾ ಭೋಸಲೆ ಹೆಂಡತಿ ಹಾಗೂ ಅವರ ಕುಟುಂಬಸ್ಥರನ್ನು ಕೊಲೆಗೆ ಯತ್ನಿಸಿದ ಆರೋಪಿ.ಭೀಮಾ ಅಥಣಿ ತಾಲೂಕಿನ ಯಲಿಹಡಲಗಿ ಗ್ರಾಮದ ನಿವಾಸಿಯಾಗಿದ್ದಾನೆ. ಗಂಡನ ಕಾಟ ತಾಳಲಾರದೇ ತವರು ಮನೆಗೆ ಹೋಗಿದ್ದ ಹೆಂಡತಿ ಹಾಗೂ ಅವರ ಮನೆಯವರನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದಾನೆ.
ಬೇಡವೆಂದರೂ ನೀವು ಹೇಗೆ ನನ್ನ ಹೆಂಡತಿಯನ್ನು ತವರು ಮನೆಗೆ ಕರೆದುಕೊಂಡು ಹೋಗಿದ್ದಿರಿ ಎಂದು ಸಿಟ್ಟಾಗಿದ್ದ ಗಂಡ ಹೆಂಡತಿಯ ತವರು ಮನೆಗೆ ಹೋಗಿ ಮನೆಯಲ್ಲಿದ್ದ ಪತ್ನಿ ರಾಣಿ ಸೇರಿ 6 ಜನರ ಮೇಲೆ ಪೆಟ್ರೋಲ್ ಸುರಿದು ಕೊಲೆಗೆ ಯತ್ನಿಸಿದ್ದಾನೆ. ಅವರೆಲ್ಲ ಅಥಣಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಯನ್ನು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿ ಭೀಮಾಶಂಕರ್ ಗುಳೇದ ಕನ್ಫರ್ಮ್ ಮಾಡಿದ್ದಾರೆ.
ಸಂಜು ಸಾಳುಂಕೆ, ಶಂಕರ್ ಸಾಳುಂಕೆ, ಕ್ರಿಷ್ಣಾ ಸಾಳುಂಕೆ, ಅಂಕುಶ ಪಡತಾರೆ, ಮನೋಹರ ಪಡತಾರೆಯವರಿಗೆ ಗಂಭೀರ ಗಾಯವಾಗಿವೆ. ಸದ್ಯಕ್ಕೆ ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಐಗಳಿ ಪೊಲೀಸರು ಆರೋಪಿ ಭೀಮಾ ಮೇಲೆ ಕೊಲೆಯತ್ನ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

