ಬೆಳಗಾವಿ: ಕಾಲಿಗೆ ಹಾಕಿಕೊಳ್ಳುವ ಶೂನಲ್ಲಿ ಅವಿತಿದ್ದ ಹಾವು ಯುವಕನ ಕಾಲಿಗೆ ಕಚ್ಚಿರುವ ಘಟನೆ ಬೆಳಗಾವಿ ತಾಲೂಕಿನ ಬೆಳಗುಂದಿಯಲ್ಲಿ ನಡೆದಿದ್ದು,ಆತ ಅಸ್ವಸ್ಥನಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಬೆಳಗುಂದಿಯ ಉಮೇಶ (26) ಚಿಕಿತ್ಸೆ ಪಡೆಯುತ್ತಿದ್ದಾನೆ. ಉಮೇಶ ಶುಕ್ರವಾರ ಗಡಿಬಿಡಿಯಲ್ಲಿ ಕೆಲಸಕ್ಕೆಂದು ಮನೆಯಿಂದ ಹೊರಟಾಗ ಬಾಗಿಲಲ್ಲಿ ಬಿಚ್ಚಿಟ್ಟ ಶೂ ಹಾಕಿಕೊಂಡಿದ್ದಾನೆ. ಮನೆ ದಾಟುವುದಕ್ಕಿಂದ
ಮುನ್ನ ಶೂನಲ್ಲಿ ಏನೋ ಚುಚ್ಚಿದ ಅನುಭವವಾಗಿ ಅದನ್ನು ಬಿಚ್ಚಿದ್ದಾನೆ. ಆಗ ಶೂವಿನಿಂದ ಹಾವು ಹೊರಬಂದಿದೆ. ಹಾವು ತನಗೆ ಕಚ್ಚಿದೆ ಎಂದು ಗೊತ್ತಾದ ಕೂಡಲೇ ಭಯಭೀತನಾದ ಉಮೇಶ ಮನೆಯವರಿಗೆ ವಿಷಯ ತಿಳಿಸಿ ತಕ್ಷಣವೇ ಆತನನ್ನು ಜಿಲ್ಲಾಸ್ಪತ್ರೆಗೆ ಕರೆತಂದು
ದಾಖಲಿಸಲಾಗಿದೆ. ಚಿಕಿತ್ಸೆ ಮುಂದುವರಿದಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ವಾದ ಹಿಂದೆ ಬೆಳಗುಂದಿಯಲ್ಲಿ ಜಾನುವಾರುಗಳಿಗೆ ಮೇವು ಹಾಕಲು ಹೋಗಿದ್ದ ಕರಣ್ ಮೋಹನ
ಪಾಟೀಲ ಎಂಬುವರು ಹಾವು ಕಡಿತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ. ಒಟ್ಟಿನಲ್ಲಿ ಹೆಚ್ಚಿದ ತಾಪಮಾನ ಮತ್ತು ತೇವಾಂಶದಿಂದಾಗಿ ಹಾವುಗಳು ತೇವ ಮತ್ತು ತಂಪಾದ ಸ್ಥಳಗಳನ್ನು ಹುಡುಕಿಕೊಂಡು ಹೊರಬರುತ್ತಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸಬೇಕಾಗಿದೆ.

