ಹಾವೇರಿ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಸವಣೂರಿನ ಅಂಬೇಡ್ಕರ್ ನಗರದ ನಿವಾಸಿಗಳಾದ ಲೋಹಿತ ತಂದೆ ಕೃಷ್ಣಪ್ಪ ಮುನಿಯಪ್ಪನವರ(23), ಮಹೇಶ ತಂದೆ
ಅಶೋಕ ಮೈಲಮ್ಮನವರ(23) ಮತ್ತು ಸವಣೂರಿನ ಹಾವಣಗಿ ಪ್ಲಾಟ್ ನಿವಾಸಿ ಮನೋಜ ತಂದೆ ಕರಿಯಪ್ಪ ಚಾರಿ(21) ಎಂದು
ಗುರುತಿಸಲಾಗಿದೆ.
ಬಂಧಿತರಿಂದ 3 ಲಕ್ಷ 17 ಸಾವಿರ 400 ರೂಪಾಯಿ ಮೌಲ್ಯದ 3 ಬ್ಯಾಗ್‌ಗಳಲ್ಲಿದ್ದ 7935 ಗ್ರಾಂ ತೂಕದ ಗಾಂಜಾ, 3370
ರೂಪಾಯಿ ನಗದು ಹಣ ಮತ್ತು ಸಣ್ಣ ಸಣ್ಣ ಪ್ಲಾಸ್ಟಿಕ್ ಪ್ಯಾಕೆಟ್‌ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ನಗರದ ಹಾವೇರಿ-ಗುತ್ತಲ ರಸ್ತೆಯಲ್ಲಿರುವ
ರೈಲ್ವೆ ಬ್ರಿಡ್ಜ್ ಹತ್ತಿರ ಆರೋಪಿಗಳು ಸಾರ್ವಜನಿಕ ರಸ್ತೆ ಬದಿಯಲ್ಲಿ ತಮ್ಮ ಸ್ವಂತ ಲಾಭಕ್ಕೋಸ್ಕರ್ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದರು
ಎನ್ನಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಅವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್ಪಿ ಎಲ್.ವೈ.ಶಿರಕೋಳ, ಡಿವೈಎಸ್‌ಪಿ
ಎಂ.ಎಸ್.ಪಾಟೀಲ ಅವರ ನೇತೃತ್ವದಲ್ಲಿ ಹಾವೇರಿ ಶಹರ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಪೊಲೀಸ್ ಇನ್ಸಪೆಕ್ಟರ್ ಮೋತಿಲಾಲ್ ಪವಾರ
ಅವರ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದ್ದು, ತನಿಖೆ ಮುಂದುವರೆದಿದೆ
ಎಂದು ಎಸ್ಪಿ ಯಶೋದಾ ವಂಟಗೋಡಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



