“ತ್ರೀ ಈಡಿಯಟ್ಸ” ನಟ ಅಚ್ಯುತ ಪೋತದಾರ ನಿಧನ

A B Dharwadkar
“ತ್ರೀ ಈಡಿಯಟ್ಸ” ನಟ ಅಚ್ಯುತ ಪೋತದಾರ ನಿಧನ

ಮುಂಬೈ : ಹಿರಿಯ ಹಿಂದಿ ಮತ್ತು ಮರಾಠಿ ಸಿನೆಮಾ ನಟ ಅಚ್ಯುತ ಪೋತದಾರ ಅವರು ಸೋಮವಾರ ರಾತ್ರಿ (ಆಗಸ್ಟ 18) ಠಾಣೆಯ ಜುಪಿಟರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು.

ಅವರನ್ನು ವಯೋಸಹಜ ಆರೋಗ್ಯ ಸಮಸ್ಯೆಗಳಿಂದಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಅಂತ್ಯಕ್ರಿಯೆ ಇಂದು ಮಂಗಳವಾರ ಠಾಣೆಯಲ್ಲಿ ನಡೆಯಲಿದೆ. ಹಿರಿಯ ನಟ 125 ಕ್ಕೂ ಹೆಚ್ಚು ಹಿಂದಿ ಚಲನಚಿತ್ರಗಳಲ್ಲಿ ನಟಿಸಿದ್ದರು. 95 ಟಿವಿ ಧಾರಾವಾಹಿಗಳು, 26 ನಾಟಕಗಳು ಮತ್ತು 45 ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದರು.

ಮಧ್ಯಪ್ರದೇಶದ ಜಬಲ್ಪುರದಲ್ಲಿ ಜನಿಸಿದ ಅವರು ತಮ್ಮ ಬಾಲ್ಯವನ್ನು ಇಂದೋರನಲ್ಲಿ ಕಳೆದರು. ಅವರು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಉನ್ನತ ಶ್ರೇಣಿಯನ್ನು ಪಡೆದು ವಿಶ್ವವಿದ್ಯಾಲಯದ ಪದಕವನ್ನು ಪಡೆದರು. ಮಧ್ಯಪ್ರದೇಶದ ರೇವಾದಲ್ಲಿ ಪ್ರಾಧ್ಯಾಪಕರಾದರು ಮತ್ತು ನಂತರ 1967 ರಲ್ಲಿ ಸೇನೆಯಲ್ಲಿ ಸೇರಿಕೊಂಡರು, ಸೇನೆಯಲ್ಲಿ ಅವರು ಕ್ಯಾಪ್ಟನ್ ಆಗಿ ನಿವೃತ್ತರಾದರು. ನಂತರ ಅವರು ಇಂಡಿಯನ್ ಆಯಿಲ್‌ನಲ್ಲಿ ಸುಮಾರು 25 ವರ್ಷಗಳ ಕಾಲ ಕಾರ್ಯನಿರ್ವಾಹಕರಾಗಿ ಕೆಲಸ ಮಾಡಿದರು ಮತ್ತು 1992 ರಲ್ಲಿ 58 ನೇ ವಯಸ್ಸಿನಲ್ಲಿ ನಿವೃತ್ತರಾದರು.

44 ನೇ ವಯಸ್ಸಿಗೆ ಹಿಂದಿ ಚಲನಚಿತ್ರ ಪ್ರವೇಶ

44 ನೇ ವಯಸ್ಸಿಗೆ ಹಿಂದಿ ಚಲನಚಿತ್ರ ರಂಗಕ್ಕೆ ಪ್ರವೇಶಿಸಿದ ಪೋತದಾರ ಅವರು ಪ್ರಾಧ್ಯಾಪಕರಾಗಿ ನಟಿಸಿದ 3 ಈಡಿಯಟ್ಸನ ‘ಕೆಹ್ನಾ ಕ್ಯಾ ಚಾಹ್ತೆ ಹೋ’ ಸಂಭಾಷಣೆಯೊಂದಿಗೆ ಖ್ಯಾತರಾದರು. ಅವರು ಆಕ್ರೋಶ, ಆಲ್ಬರ್ಟ ಪಿಂಟೊ ಕೊ ಘುಸ್ಸಾ ಕ್ಯೂಂ ಆತಾ ಹೈ, ಅರ್ಧ ಸತ್ಯ, ವಿಜೇತಾ, ಪರಿಂದಾ, ನರಸಿಂಹ, ರಾಜು ಬನ್ ಗಯಾ ಜೆಂಟಲಮ್ಯಾನ್, ದಾಮಿನಿ – ಲೈಟ್ನಿಂಗ್, ಧುಂದ್: ದಿ ಫಾಗ್, ಎಕ್ಕೀಸ ಪೋಪೋಂಕಿ ಸಲಾಮಿ, ಕರ್ಝ, ಲಗೇ ರಹೋ ಕಿಯೋತ್ನಾಥ ಭಾಯ್, ಮುನ್ನಾ ಭಾಯ ಆದಿ ಚಿತ್ರಗಳಲ್ಲೂ ಕೆಲಸ ಮಾಡಿದ್ದಾರೆ. ಅವರು ಭಾರತ ಏಕ್ ಖೋಜ (ದೂರದರ್ಶನ), ಶುಭ ಮಂಗಲ ಸಾವಧಾನ, ಶ್ರೀಮತಿ ತೆಂಡೂಲ್ಕರ, ವಾಗ್ಲೆ ಕಿ ದುನಿಯಾ, ಆಹತ್ ಸೀಸನ್ 1, ಅಗ್ಲೇ ಜನಮ್ ಮೋಹೆ ಬಿಟಿಯಾ ಹಿ ಕಿ ಜೋ, ಅಮಿತಾ ಕಾ ಅಮಿತ, ಪ್ರಧಾನಮಂತ್ರಿ ಮತ್ತು ಆಂದೋಲನ ಸೇರಿದಂತೆ ಟಿವಿ ಸರಣಿಗಳಲ್ಲಿ ಕಾಣಿಸಿಕೊಂಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.