ಗೋಕಾಕ : ಗೋಕಾಕ ಮುಸ್ಲಿಂ ಸಮಾಜದ ಹಿರಿಯರು ಹಾಗೂ ತಂಜೀಮ ಎಜುಕೇಷನ್ ಸೊಸೈಟಿಯ ಮಾಜಿ ನಿರ್ದೇಶಕರಾದ ದಸ್ತಗೀರಸಾಬ ಯು. ಅತ್ತಾರ (80)ಅವರು ಶುಕ್ರವಾರ ಸಂಜೆ ನಿಧನರಾದರು ಎಂದು ತಿಳಿಸಲು ವಿಷಾದಿಸುತ್ತೇವೆ.
ಕೆಲ ದಿನಗಳಿಂದ ಅನಾರೋಗ್ಯದಿಂದಿದ್ದ ಅವರು, ಇಬ್ಬರು ಪುತ್ರರು, ಪುತ್ರಿ, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗ ಬಿಟ್ಟು ಅಗಲಿದ್ದಾರೆ.
ದಿವಂಗತರ ಅಂತ್ಯಕ್ರಿಯೆ ಶನಿವಾರ ಬೆಳಗ್ಗೆ 10.30 ಗಂಟೆಗೆ ಗೋಕಾಕದಲ್ಲಿ ನಡೆಯಲಿದೆ.
ಗೋಕಾಕ ಮುಸ್ಲಿಂ ಸಮಾಜದ ಹಿರಿಯ ಡಿ.ಯು. ಅತ್ತಾರ ನಿಧನ

