ಹಾವೇರಿ: ಇಲ್ಲಿಯ ಇಜಾರಿ ಲಕಮಾಪುರದಲ್ಲಿರುವ ಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ವಸತಿಯುತ ಶಾಲೆಯಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ ಅವರು ಗುರುವಾರ ಸಂಜೆ ಮಕ್ಕಳ ಜತೆಗೆ ಕೇಕ್ ಕತ್ತರಿಸಿ ಸಿಹಿ ತಿನಿಸುವ ಮೂಲಕ ಜನ್ಮ ದಿನವನ್ನು ಆಚರಿಸಿಕೊಂಡರು.
ಬಳಿಕ ಮಾತನಾಡಿದ ಅವರು, ಪ್ರತಿ ಬಾರಿಯೂ ಸಹ ಜನ್ಮ ದಿನವನ್ನು ಸಾಮಾನ್ಯವಾಗಿ ವಿಶೇಷಚೇತನ ಮಕ್ಕಳ ಜತೆಗೆ ಆಚರಿಸಿಕೊಂಡು ಬರುತ್ತಿರುವುದು ನನಗೂ ಸಂತೋಷವನ್ನುAಟು ಮಾಡಿದೆ. ಮಕ್ಕಳ ಜತೆಗೆ ಸ್ವಲ್ಪ ಹೊತ್ತು ಬೆರೆತು, ಕೇಕ್ ಕತ್ತರಿಸಿ ಸಿಹಿ ತಿನಿಸುತ್ತೇನೆ. ಇದು ಕೂಡ ಬೇರೆಯವರಿಗೆ ಮಾದರಿಯಾಗಬೇಕಿದೆ ಎಂದರು.
ಈ ವೇಳೆ ನಗರಾಭಿವೃದ್ಧಿ ಪ್ರಾಕಾರ ಅಧ್ಯಕ್ಷ ಎಸ್.ಎಫ್.ಎನ್ ಗಾಜಿಗೌಡ್ರ, ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ಡಿ.ಬಸವರಾಜ, ತಹಸೀಲ್ದಾರ ಶರಣಮ್ಮö, ಮುಖಂಡರಾದ ಪ್ರಕಾಶಗೌಡ ಪಾಟೀಲ, ಜಮೀರ್ ಜಿಗರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು