ಟೋಕಿಯೋ, ಜ.24- ವಿದೇಶಗಳಲ್ಲಿ ಬೆತ್ತಲೆಯಾಗಿ ಕುಣಿಯುವುದು, ನ್ಯೂಡ್ ಬೀಚ್ ಸೇರಿದಂತೆ ಹಲವು ಪ್ರದೇಶದಲ್ಲಿ ಬೆತ್ತಲೆಯಾಗಿ ಪಾಲ್ಗೊಳ್ಳಲು ಜಗತ್ತಿನ ವಿವಿಧ ಸರ್ಕಾರಗಳು ಅವಕಾಶ ಮಾಡಿಕೊಟ್ಟಿವೆ. ಅದರಂತೆ ಜಪಾನಿನ ಕೊನೊಮಿಯಾ ಧಾರ್ಮಿಕ ಕೇಂದ್ರದಲ್ಲಿ ಪ್ರತಿ ವರ್ಷ ನಡೆಯುವ ಪುರುಷರ ಬೆತ್ತಲೆ ಹಬ್ಬದಲ್ಲಿ ಪಾಲ್ಗೊಳ್ಳಲು ಈ ಬಾರಿ ಮಹಿಳೆಯರಿಗೂ ಅವಕಾಶ ಮಾಡಿಕೊಟ್ಟಿದೆ.
ಜಪಾನ್ ದೇಶದ ಪುರುಷರ ಈ ಬೆತ್ತಲೆ ಹಬ್ಬ ವಿಶ್ವ ವಿಖ್ಯಾತವಾಗಿದ್ದು 1650ರಿಂದ ಈ ಸಂಪ್ರದಾಯ ನಡೆದುಕೊಂಡು ಬರುತ್ತಿದೆ. ಇದೇ ಮೊದಲ ಸಲ ಪುರುಷರು ಬೆತ್ತಲೆಯಾಗಿ ಆಚರಿಸುವ ಈ ಹಬ್ಬದಲ್ಲಿ ಮಹಿಳೆಯರೂ ಸಹ ಪಾಲ್ಗೊಳ್ಳಲು ಅವಕಾಶ ನೀಡಲಾಗಿದ್ದು ವಿಶೇಷ.
ಜಪಾನಿನ ಕೊನೊಮಿಯಾ ಧಾರ್ಮಿಕ ಕೇಂದ್ರದಲ್ಲಿ 1650ರಿಂದ ಪುರುಷರ ಬೆತ್ತಲೆ ಹಬ್ಬ ನಡೆದುಕೊಂಡು ಬರುತ್ತಿದೆ. ಈ ಹಬ್ಬವನ್ನು ಜಾಪನ್ ಸಾಂಪ್ರಾದಾಯಿಕ ಭಾಷೆಯಲ್ಲಿ ಹಡಕ ಮಟ್ಸುರಿ ಎಂದು ಕರೆಯುತ್ತಾರೆ. ಜಪಾನ್‌ನ ಆ್ಯಚಿ ಫ್ರೆಕ್ಷರ್ ಸಮೀಪದ ಇನಝವಾ ಪಟ್ಟಣದಲ್ಲಿ ಈ ಹಬ್ಬ ಅದ್ಧೂರಿಯಾಗಿ ನಡೆಯುತ್ತಿದ್ದು ಪ್ರತಿ ಭಾರಿ ಪರುಷರ ಬೆತ್ತಲೆ ಹಬ್ಬದಲ್ಲಿ ಸುಮಾರು 10,000ಕ್ಕೂ ಹೆಚ್ಚು ಪುರುಷರು ಸಂಪೂರ್ಣ ಬೆತ್ತಲೆಯಾಗಿ ಪಾಲ್ಗೊಳ್ಳುತ್ತಾರೆ. ಈ ಬಾರಿ ಫೆಬ್ರುವರಿ 22 ರಂದು ಹಡಕ ಮಟ್ಸುರಿ ಹಬ್ಬ ಆಯೋಜಿಸಲಾಗಿದ್ದು 10 ಸಾವಿರಕ್ಕೂ ಹೆಚ್ಚು ಬೆತ್ತಲೆ ಪುರುಷರು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದರ ಜೊತೆಗೆ ಇದೇ ಮೊದಲ ಬಾರಿಗೆ 40 ಮಹಿಳೆಯರಿಗೂ ಈ ಹಬ್ಬದಲ್ಲಿ ಪಾಲ್ಗೊಳ್ಳಲು ಕೊನೊಮಿಯಾ ಧಾರ್ಮಿಕ ಕೇಂದ್ರ ಅವಕಾಶ ನೀಡಿದೆ. ಆದರೆ ಇದರ ಜೊತೆಗೆ ಕೆಲ ಷರತ್ತುಗಳನ್ನು ವಿಧಿಸಲಾಗಿದೆ. ಮೊದಲ ಬಾರಿಗೆ ಕೇವಲ 40 ಮಹಿಳೆಯರಿಗೆ ಮಾತ್ರ ಅವಕಾಶ ನೀಡಲಾಗಿದೆ.
1650ರಿಂದ ಈ ಧಾರ್ಮಿಕ ಹಬ್ಬ ಕೇವಲ ಪುರುಷರಿಗೆ ಮಾತ್ರ ಆಯೋಜಿಸಲಾಗುತ್ತಿತ್ತು. ವರ್ಷದಿಂದ ವರ್ಷಕ್ಕೆ ಈ ಹಬ್ಬದಲ್ಲಿ ಪಾಲ್ಗೊಳ್ಳುವ ಪುರುಷರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹಲವು ವರ್ಷಗಳಿಂದ ಮಹಿಳೆಯರಿಗೆ ಈ ಹಬ್ಬದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬೇಕು ಅನ್ನುವ ಮನವಿಗಳ ಮಹಾಪೂರ ಬರುತ್ತಿತ್ತು. ಈ ಮನವಿಗಳನ್ನು ಪುರಸ್ಕರಿಸಿರುವ ಕೊನೊಮಿಯಾ ಧಾರ್ಮಿಕ ಕೇಂದ್ರವು ಈ ವರ್ಷ 40 ಮಹಿಳೆಯರಿಗೆ ಅವಕಾಶ ನೀಡಿದ್ದು, ಹಂತ ಹಂತವಾಗಿ ಮಹಿಳೆಯರ ಪಾಲ್ಗೊಳ್ಳುವಿಕೆ ಸಂಖ್ಯೆ ಹೆಚ್ಚಿಸಲಾಗುತ್ತದೆ ಎಂದು ಕೊನೊಮಿಯಾ ಧಾರ್ಮಿಕ ಕೇಂದ್ರ ಹೇಳಿದೆ.
ಕಳೆದ 3 ವರ್ಷಗಳಿಂದ ಕೊರೋನಾ ಕಾರಣದಿಂದ ಈ ಹಬ್ಬ ಆಯೋಜಿಸಲು ಸಾಧ್ಯವಾಗಲಿಲ್ಲ. 3 ವರ್ಷಗಳ ಬಳಿಕ ಹಬ್ಬ ಆಯೋಜಿಸಿರುವ ಕಾರಣ ಉತ್ಸಾಹ ಹೆಚ್ಚಾಗಿದೆ. ಸಂಪೂರ್ಣ ಬಟ್ಟೆ ಧರಿಸಿ ಮಹಿಳೆಯರು ಈ ಹಬ್ಬದಲ್ಲಿ ಪಾಲ್ಗೊಳ್ಳಲು ಸೂಚನೆ ನೀಡಲಾಗಿದೆ. ಇದು ಧಾರ್ಮಿಕ ಹಬ್ಬ, ಇಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು. ಹೀಗಾಗಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ ಎಂದು ಧಾರ್ಮಿಕ ಕೇಂದ್ರ ಸ್ಪಷ್ಟಪಡಿಸಿದೆ.