ಬೆಳಗಾವಿ : ಬೆಳಗಾವಿ ದರ್ಪಣ್ ರೋಟರಿ ಕ್ಲಬ್, ಬೆಳಗಾವಿ ಯುವ ದರ್ಪಣ್ ರೋಟರಾಕ್ಟ್ ಕ್ಲಬ್ ಸಹಕಾರದಲ್ಲಿ ಯುವ ನೇತೃತ್ವ ಕಾರ್ಯಾಗಾರವನ್ನು ಮಂಗಳವಾರ ನಗರದ ಪೀಪಲ್ ಟ್ರೀ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರೋಟೇರಿಯನ್ ಅಶೋಕ ನಾಯ್ಕ ಅವರು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುವ ಮಾತುಗಳ ಮೂಲಕ ಉತ್ಸಾಹ ತುಂಬಿದರು. ಪಿಜಿಎಜಿ ರೋಟೇರಿಯನ್ ಡಾ. ಪ್ರದೀಪ ಕುಮಾರ್ ಎಂ. ಮತ್ತು ದೀಪ್ಸ್ ಮೇನ್ ಮಾತನಾಡಿದರು.
ರೋಟೇರಿಯನ್ ನೀತಾ ಶೆಟ್ಟಿ ಉಪಸ್ಥಿತರಿದ್ದರು.
ಪ್ರಾಜೆಕ್ಟ್ ಯಶಸ್ವಿಯಾಗಿ ನಡೆಸಲು ರೋಟೇರಿಯನ್ ವಿಜಯಲಕ್ಷ್ಮಿ ಮನ್ನಿಕೇರಿ, ಇವೆಂಟ್ ಚೇರ್ಸ್ ರೋಟೇರಿಯನ್ ಜ್ಯೋತಿ ಕುಲಕರ್ಣಿ ಮತ್ತು ರೋಟರಾಕ್ಟರ್ ಪ್ರೀತಿ ಮನ್ನಿಕೇರಿ ಮತ್ತು ಕಾರ್ಯದರ್ಶಿ ರೋಟೇರಿಯನ್ ಕಾವೇರಿ ಕರೂರ್ ಸಹಕರಿಸಿದ್ದರು.
ನಿರಂತರ ಪ್ರೋತ್ಸಾಹಕ್ಕಾಗಿ ರೋಟೇರಿಯನ್ ಡಾ. ಸ್ಪೂರ್ತಿ ಮಾಸ್ತಿಹೊಳಿ, ರೋಟೇರಿಯನ್ ಡಾ. ಶಿವಲೀಲಾ ಮತ್ತು ರೋಟೇರಿಯನ್ ಸುರೇಖಾ ಮುಮ್ಮಿಗಟ್ಟಿ ಅವರಿಗೆ ಧನ್ಯವಾದ ಸಲ್ಲಿಸಲಾಯಿತು. ರೋಟರಾಕ್ಟರ್ ಖುಷಿ ಮಳಿಮಠ ನಿರ್ವಹಿಸಿದರು.

