ಬೆಳಗಾವಿ : ಚಿಕ್ಕ ಮಕ್ಕಳ ಕ್ರಿಕೆಟ್ ಆಟಕ್ಕೆ ಸಂಬಂಧಿಸಿದಂತೆ ಶಹಾಪುರದ ಅಳವಣ ಗಳ್ಳಿಯಲ್ಲಿ ಗುರುವಾರ ರಾತ್ರಿ ನಡೆದ ದೊಡ್ಡವರ ಹೊಡೆದಾಟದಲ್ಲಿ ಎಂಟು ಜನ ಗಾಯಗೊಂಡಿದ್ದು 10 ಜನರನ್ನು ವಶಕ್ಕೆ ಪಡೆಯಲಾಗಿದೆ.
ಗಲಾಟೆಗೆ ಕೋಮು ಸ್ಪರ್ಶವೂ ಆಗಿದ್ದು ಅಹಿತಕರ ಘಟನೆ ತಡೆಯಲು 3 ಕೆಎಸ್ ಆರ್ ಪಿ ಪಡೆ ಮತ್ತು 3 ಇನ್ಸ್ಪೆಕ್ಟರ್ ನೇತೃತ್ವದಲ್ಲಿ 59 ಜನ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಪರಸ್ಥಿತಿ ಬಿಗುವಿನಿಂದ ಕೂಡಿದ್ದರೂ ನಿಯಂತ್ರಣದಲ್ಲಿದೆ.
ಹೊಡೆದಾಟಕ್ಕೆ ಬಳಸದಿದ್ದರೂ ತಲವಾರ್ ಮುಂತಾದ ಆಯುಧಗಳನ್ನು ಝಳಪಿಸಿದ್ದು ಸಿಸಿಟಿವಿ ದೃಶ್ಯದಲ್ಲಿ ಕಂಡು ಬಂದಿದೆ. ಮನೆಗಳ ಮೇಲೆ ಅಲ್ಪ ಪ್ರಮಾಣದ ಕಲ್ಲು ತೂರಾಟವೂ ನಡೆದಿದೆ. ಗಾಯಗೊಂಡವರಲ್ಲಿ ಎರಡೂ ಕೋಮಿನವರಿದ್ದು ಜಿಲ್ಲಾ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಒಂದು ಕೋಮಿನ ಜನ ಪೊಲೀಸರಿಗೆ ಮಾಹಿತಿ ನೀಡಿ ಒಂದು ನಿರ್ದಿಷ್ಟ ಕೋಮನ್ನು ಗುರಿಯಾಗಿರಿಸಿ ಅವರ ಮನೆಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದೆ, ಅವರನ್ನು ಬಂಧಿಸಿ ಎಂದು ಆಗ್ರಹಿಸಿದರು. ಘಟನೆ ನಡೆದ ಸ್ಥಳದಲ್ಲಿ ಚಿಕ್ಕ ಮತ್ತು ಮಧ್ಯಮ ಗಾತ್ರದ ಕಲ್ಲುಗಳು ಮತ್ತು ಒಂದು ತಲವಾರ ಕೂಡ ಕಂಡು ಬಂದಿದೆ.
ಪೊಲೀಸ್ ಆಯುಕ್ತ ಎಡಾ ಮಾರ್ಟೀನ್ ಮತ್ತು ಡಿಎಸ್ ಪಿ ಜಗದೀಶ ಭೆಟ್ಟಿ ನೀಡಿದ್ದರು.