ಲಖನೌ, ೨೯- ಜ್ಯುವೆಲರಿ ಶಾಪ್ ಗಳಲ್ಲಿ ಕಳ್ಳತನ ಆಗೋದು ಇದೇ ಮೊದಲೇನಲ್ಲ. ಆದರೆ ಅದನ್ನೂ ಎಷ್ಟು ಚಾಣಾಕ್ಷ ತನದಿಂದ ಮಾಡಿದ್ದಾರೆ ಅನ್ನೋದರ ಸುದ್ದಿಯ ವಿಚಾರ. ಇಲ್ಲೊಬ್ಬ ವಯಸ್ಸಾದ ಮಹಿಳೆ ಸಲೀಸಾಗಿ ಆಭರಣ ಕದ್ದು ಅಂಗಡಿಯವರ ಅರಿವಿಗೂ ಬಾರದ ರೀತಿಯಲ್ಲಿ ಅದನ್ನು ಎತ್ತಿಕೊಂಡು ಹೋಗಿದ್ದಾಳೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗಿದೆ.
ಹೌದು, ಈ ಘಟನೆ ನಡೆದಿರೋದು ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ. ಇಲ್ಲಿರುವ ಬಲ್ದೇವ್ ಪ್ಲಾಜಾದಲ್ಲಿರುವ ಬೆಚು ಲಾಲ್ ಸರಾಫ್ ಪ್ರೈವೇಟ್ ಲಿಮಿಟೆಡ್‌ಗೆ ಮಹಿಳೆಯೊಬ್ಬರು ಭೇಟಿ ನೀಡಿದ್ದಾರೆ. ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಆಭರಣ ಕದ್ದು ಪರಾರಿಯಾಗಿದ್ದಾಳೆ. ಮೊದಲಿಗೆ ಒಂದಿಷ್ಟು ಆಭರಣದ ಬಾಕ್ಸ್ ತೆರೆಸಿ ನೋಡುತ್ತಾ ಕುಳಿತಿದ್ದ ಈಕೆ ಅದನ್ನು ಹಾಕಿ ತೋರಿಸುವಂತೆ ಅಲ್ಲಿದ್ದ ಆಭರಣ ಅಂಗಡಿಯವರಿಗೆ ಹೇಳುತ್ತಾಳೆ. ಅವರು ಕೂಡ ಹೀಗೆ ಮಾಡುತ್ತಾರೆ. ಬೇರೊಂದು ಆಭರಣ ತೋರಿಸಿ ಎಂದು ಹೇಳುತ್ತಾ ಒಂದು ಆಭರಣದ ಬಾಕ್ಸ ಅನ್ನು ಸೀರೆಯೊಳಗೆ ಮುಚ್ಚಿಕೊಳ್ತಾಳೆ.
ಯಾವಾಗ ಆಭರಣ ಸಿಕ್ತು ಅನ್ನೋದು ಗೊತ್ತಾಗ್ತಾ ಇದ್ದಂತೆ, ನನಗ್ಯಾವುದು ಇಷ್ಟ ಆಗಲಿಲ್ಲ ಎಂದು ಸಲೀಸಾಗಿ ಎದ್ದು ಹೋಗ್ತಾರೆ. ಕೇವಲ 20 ಸೆಕೆಂಡ್ ಕೂಡ ಆಗೋದಿಲ್ಲ. ಅಷ್ಟ ಕಡಿಮೆ ಸಮಯದಲ್ಲಿ 10 ಲಕ್ಷ ರೂ. ಮೌಲ್ಯದ ಆಭರಣ ಕದ್ದು ಪರಾರಿಯಾಗಿದ್ದಾಳೆ. ಇವಳ ಕೈ ಚಳಕ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಇದು ಅಂಗಡಿಯವರ ಗಮನಕ್ಕೂ ಬಂದಿಲ್ಲ. ಸಿಸಿ ಕ್ಯಾಮರಾ ಚೆಕ್ ಮಾಡಿದಾಗ ಗೊತ್ತಾಗಿದೆ.
Watch this CCTV footage
How a woman with red Mask managed to fled away with ₹ 6.73 lakh worth necklace in Baldev Plaza of Golghar area under Cantt police limits of Gorakhpur, UttarPradesh pic.twitter.com/lnbWExM2BV
— Ibrahim Shaikh (@Unofficialibbo) November 28, 2022