ಜಕಾರ್ತಾ (ಇಂಡೋನೇಷ್ಯಾ) : ಶನಿವಾರ ತಡರಾತ್ರಿ ಫುಟಬಾಲ್ ಪಂದ್ಯದ ವೇಳೆ ನಡೆದ ಹಿಂಸಾಚಾರದಿಂದ ಕನಿಷ್ಠ 127 ಮಂದಿ ಸಾವಿಗೀಡಾದ ಘಟನೆ ಜಕಾರ್ತದ ಪೂರ್ವ ಜಾವದ ಮಲಂಗ್ನಲ್ಲಿ ನಡೆದಿದೆ.
ಪಂದ್ಯದಲ್ಲಿ ಎದುರಾಳಿ ತಂಡ ಗೆಲುವು ಸಾಧಿಸಿದ್ದರಿಂದ ರೊಚ್ಚಿಗೆದ್ದ ಅಭಿಮಾನಿಗಳು ಮೈದಾನಕ್ಕೆ ಇಳಿದು ದಾಂಧಲೆ ನಡೆಸಿದ್ದಾರೆ. ಪ್ರೇಕ್ಷಕರ ನೂಕುನುಗ್ಗಲು ಉಂಟಾಗಿ 129 ಜನರು ಸಾವನ್ನಪ್ಪಿದ್ದಾರೆ ಮತ್ತು 180 ಜನರು ಗಾಯಗೊಂಡಿದ್ದಾರೆ ಎಂದು ಇಂಡೋನೇಷ್ಯಾ ಪೊಲೀಸರು ಭಾನುವಾರ ತಿಳಿಸಿದ್ದಾರೆ.
BREAKING: Over 100 people were killed and 200 injured in a riot at a football stadium in Malang Indonesia, authorities said. #news #BreakingNews #Newsnight #NewsUpdate #NewsBreak #soccer #Indonesia#AremavsPersebaya#arema #Kanjuruhan #bonekjancok #football pic.twitter.com/QdX0fklRjW
— Mr Zihad (@MrZihad10) October 2, 2022
ಅರೆಮಾ ಎಫ್ಸಿ ಮತ್ತು ಪರ್ಸೆಬಯಾ ಸುರಬಯಾ ನಡುವಿನ ಪಂದ್ಯ ಮುಗಿದ ನಂತರ, ಸೋತ ತಂಡದ ಬೆಂಬಲಿಗರು ಮೈದಾನಕ್ಕೆ ನುಗ್ಗಿದರು ಮತ್ತು ಪೊಲೀಸರು ಅಶ್ರುವಾಯು ಹಾರಿಸಿದರು, ಕಾಲ್ತುಳಿತ ಮತ್ತು ಉಸಿರುಗಟ್ಟಿ ಹಲವರು ಮೃತಪಟ್ಟಿದ್ದಾರೆ ಎಂದು ಪೂರ್ವ ಜಾವಾ ಪೊಲೀಸರು ತಿಳಿಸಿದ್ದಾರೆ .