ಇಂದೋರ, ೩೦- ರಾಮನವಮಿ ಆಚರಣೆ ವೇಳೆ ಮೆಟ್ಟಿಲುಗಳ ಬಾವಿ ಮೇಲೆ ಹಾಸಿದ್ದ ಸಿಮೆಂಟ್ ಕಾಂಕ್ರೀಟ ಕುಸಿದು ಬಿದ್ದ ಪರಿಣಾಮ ಹದಿಮೂರು ಜನರು ಪ್ರಾಣ ಕಳೆದುಕೊಂಡ ದಾರುಣ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ..
ಗುರುವಾರ ರಾಮನವಮಿ ಆಚರಣೆಗಳು ನಡೆಯುತ್ತಿದ್ದ ವೇಳೆ ನಗರದ ಸ್ನೇಹ ನಗರ ಪ್ರದೇಶದಲ್ಲಿರುವ ಶ್ರೀ ಬಾಲೇಶ್ವರ ದೇವಸ್ಥಾನದಲ್ಲಿ ಈ ದುರ್ಘಟನೆ ನಡೆದಿದೆ.
11 ಮೃತ ದೇಹಗಳನ್ನು (10 ಮಹಿಳೆಯರು ಮತ್ತು ಒಬ್ಬ ಪುರುಷ) ಸ್ಥಳದಿಂದ ಹೊರತೆಗೆಯಲಾಗಿದ್ದು, ಹಲವರನ್ನು ರಕ್ಷಿಸಲಾಗಿದೆ. ರಕ್ಷಿಸಿದವರಲ್ಲಿ ಇಬ್ಬರು ಗಾಯಗೊಂಡು ಸಾವನ್ನಪ್ಪಿದ್ದಾರೆ. ದುರ್ಘಟನೆಯಲ್ಲಿ ಒಟ್ಟು 13 ಜನರು ಸಾವನ್ನಪ್ಪಿದ್ದಾರೆ ಪೊಲೀಸ ಮೂಲಗಳು ತಿಳಿಸಿವೆ.
ದೇವಸ್ಥಾನದ ಒಳಗೆ ಭಕ್ತರು ಬಾವಿಯ ಮೇಲೆ ನಿಂತಿದ್ದಾಗ ಬಾವಿಯ ಹೊದಿಕೆ ಕುಸಿದಿದೆ. ಬಾವಿಯೊಳಗೆ ಇನ್ನೂ ಸಿಲುಕಿರುವವರನ್ನು ರಕ್ಷಿಸುವ ಪ್ರಯತ್ನಗಳು ನಡೆಯುತ್ತಿವೆ. ಘಟನೆಯ ಸಮಯದಲ್ಲಿ ಸುಮಾರು ಎರಡು ಡಜನ್ ಜನರು ಮೆಟ್ಟಿಲು ಬಾವಿಯ ಮೇಲೆ ನಿಂತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಆಂಬ್ಯುಲೆನ್ಸ್ ಮತ್ತು ಅಗ್ನಿಶಾಮಕ ದಳದ ಸೇವೆಗಳು ಸಮಯಕ್ಕೆ ಸ್ಥಳಕ್ಕೆ ತಲುಪಲಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಘಟನಾ ಸ್ಥಳಕ್ಕೆ ಇಂದೋರ ಪೊಲೀಸ್ ಮತ್ತು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ದೌಡಾಯಿಸಿದ್ದಾರೆ.