ಬೆಂಗಳೂರು: ಮಹಾನಗರ ಸೇರಿದಂತೆ ರಾಜ್ಯದಲ್ಲಿ 13,133 ಪೌರ ಕಾರ್ಮಿಕರನ್ನು ಸರ್ಕಾರಿ ನೌಕರರೆಂದು ಪರಿಗಣಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
13,133 ಪೌರಕಾರ್ಮಿಕರಿಗೆ ವಿಶೇಷ ನೇಮಕಾತಿ ನಿಯಮಗಳ ಅಡಿಯಲ್ಲಿ ಸರ್ಕಾರಿ ನೌಕರರೆಂದು ನೇಮಕಾತಿ ಮಾಡಿಕೊಳ್ಳುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.
ನಗರಸಭೆಯ 5,533, ಪುರಸಭೆಗಳ 3,673 ಪೌರ ಕಾರ್ಮಿಕರ ಸೇವೆ ಖಾಯಂಗೊಳ್ಳಲಿದೆ. ಈ ನೌಕರರು ಈಗ 17,000-28,980 ರೂ. ವೇತನ ಶ್ರೇಣಿ ಅಡಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. 11,133 ಪೌರ ಕಾರ್ಮಿಕರ ಕಾಯಂ ಆಗುತ್ತಿರುವುದು ರಾಜ್ಯದಲ್ಲಿ ಇದೇ ಮೊದಲು ಎನ್ನಲಾಗಿದೆ.
26,000 ಪೌರಕಾರ್ಮಿಕರನ್ನು ಸೇರ್ಪಡೆಗೊಳಿಸಿ, ಇದರಲ್ಲಿ ಕಸಗುಡಿಸುವವರನ್ನೂ ಸೇರಿಸಬೇಕು ಎಂಬ ಬೇಡಿಕೆ ಇತ್ತು. ಇದು ಮೊದಲ ಹಂತವಾಗಿದ್ದು, ಪೌರ ಕಾರ್ಮಿಕರ ಬೇಡಿಕೆಯಂತೆ ಉಳಿದ 12,800 ಪೌರಕಾರ್ಮಿಕರಿಗೆ ಶೀಘ್ರದಲ್ಲೇ ವಸತಿ ಕಲ್ಪಿಸಲಾಗುವುದು ಎಂದು ಸರ್ಕಾರ ಹೇಳಿದೆ.
ಎಲ್ಲಾ 26,000 ಜನರನ್ನು ಸೇರಿಸಬೇಕೆಂದು ನಾವು ಬಯಸಿದ್ದೇವೆ. ಇತರರಲ್ಲಿ ಲೋಡರ್‌ಗಳು, ಡ್ರೈವರ್‌ಗಳು ಮತ್ತು ಕ್ಲೀನರ್‌ಗಳು ಎಂದು ವರ್ಗೀಕರಿಸಲಾಗಿದೆ. ಇದನ್ನು ಪ್ರತ್ಯೇಕವಾಗಿ ವರ್ಗೀಕರಿಸಲು ಸಾಧ್ಯವಿಲ್ಲ ಎಂದು ಪೌರಕಾರ್ಮಿಕ ಸಮಿತಿಯ ಸದಸ್ಯ ಕ್ಲಿಪ್ಟಾನ್ ರೋಜಾರಿಯೋ ತಿಳಿಸಿದ್ದಾರೆ.
ಹಣಕಾಸಿನ ಸಮಸ್ಯೆಗಳಿದ್ದು, ಹೀಗಾಗಿ ನಾವು ಎಲ್ಲವನ್ನು ಒಂದೇ ಬಾರಿಗೆ ಸೇರ್ಪಡೆ ಮಾಡಲು ಸಾಧ್ಯವಾಗಲಿಲ್ಲ. ಉಳಿದ 12,800 ಸೇರ್ಪಡೆಗಾಗಿ ನಾವು ಕಾಯಬೇಕಾಗಿದೆ ಎಂದು ಸಚಿವರೊಬ್ಬರು ತಿಳಿಸಿದ್ದಾರೆ.
ಸುಮಾರು 50 ಸಾವಿರ ಪೌರಕಾರ್ಮಿಕರು ತಮ್ಮ ಸೇವೆ ಕಾಯಂಗೊಳಿಸುವಂತೆ ಕೋರಿ ಸುಮಾರು ಮೂರು ತಿಂಗಳ ಹಿಂದೆ ಮುಷ್ಕರ ನಡೆಸಿದ್ದರು, ಅವರ ಬೇಡಿಕೆಗೆ ರಾಜ್ಯ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿ ಸಮಿತಿ ರಚಿಸಿರುವುದನ್ನು ಸ್ಮರಿಸಬಹುದಾಗಿದೆ.