ಬೆಳಗಾವಿ : ಮಹಾರಾಷ್ಟ್ರ ದಿಂದ ಖಾಸಗಿ ಬಸ್ಸಿನಲ್ಲಿ ರಾಜ್ಯಕ್ಕೆ ಬಂದಿದ್ದ ವ್ಯಕ್ತಿಯೊಬ್ಬರಿಂದ ದಾಖಲೆಗಳಿಲ್ಲದ 2 ಕೋಟಿ ರೂಪಾಯಿ ವಶಕ್ಕೆ ಪಡೆದ ಬೆನ್ನಲ್ಲೇ ಮುಂಬಯಿಯಿಂದ ಖಾಸಗಿ ಬಸ್ಸಿನಲ್ಲಿ ರಾಜ್ಯಕ್ಕೆ ಬರುತ್ತಿದ್ದ ಮತ್ತೊಬ್ಬ ವ್ಯಕ್ತಿಯಿಂದ ದಾಖಲೆಗಳಿಲ್ಲದ 1 ಕೋಟಿ 50 ಲಕ್ಷ ರೂಪಾಯಿಯನ್ನು ಗುರುವಾರ ಬೆಳಗಿನ ಜಾವ ನಡೆದಿದೆ.
ಚುನಾವಣೆ ಹಿನ್ನಲೆಯಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿಯ ಕೊಗನೋಳ್ಳಿ ತಪಾಸಣಾ ಕೇಂದ್ರದಲ್ಲಿ
ಕಾರ್ಯ ನಿರ್ವಹಿಸುತ್ತಿದ್ದ ಪೊಲೀಸರು ಹಾಗೂ ಎಫ್ ಎಸ್ ಟಿ ಅಧಿಕಾರಿಗಳು ಮುಂಬಯಿಯಿಂದ ಬಂದ ಖಾಸಗಿ ಬಸೊಂದನ್ನು ತಪಾಸಣೆ ಮಾಡಿದಾಗ ವ್ಯಕ್ತಿಯೊಬ್ಬರ ಬಳಿ ಈ ಹಣ ಪಟ್ಟೆಯಾಗಿದೆ. ಹಣಕ್ಕೆ ಯಾವುದೇ ದಾಖಲೆಗಳಿಲ್ಲದರಿಂದ ಹಣ ವಶಕ್ಕೆ ಪಡೆದು ಸರಕಾರಿ ಖಜಾನೆಯಲ್ಲಿ ಜಮಾ ಮಾಡಿ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲಾಗಿದೆ.
ಪ್ರಯಾಣಿಕನ ಬಳಿ ಯಾವದೇ ದಾಖಲೆ ಇಲ್ಲ ಎಂದು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ತಿಳಿಸಿದ್ದಾರೆ.
ಬುಧವಾರ ಬೆಳಗಿನ ಜಾವ ಮುಂಬಯಿಯಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸನ್ನು ಹಿರೇಬಾಗೇವಾಡಿ ಟೋಲ್ ಪ್ಲಾಝದಲ್ಲಿ ತಪಾಸಣೆ ಮಾಡಿದಾಗ ವ್ಯಕ್ತಿಯೊಬ್ಬರ ಬಳಿ 2 ಕೋಟಿ ರೂಪಾಯಿ ಪತ್ತೆಯಾಗಿತ್ತು. ಹಣಕ್ಕೆ ಯಾವುದೇ ದಾಖಲೆಗಳಿರದ ಕಾರಣ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲಾಗಿತ್ತು.