ಬೆಳಗಾವಿ : ಸಾರ್ವಜನಿಕ ಗಣೇಶ ಮಂಡಳಿಗಳು ಸ್ಥಾಪನೆ ಮಾಡುವ ಗಣೇಶ ಮೂರ್ತಿ ಮುಂದಿಡುವ ತೆಂಗಿನಕಾಯಿ ಮತ್ತು ವಿವಿಧ ಹಣ್ಣುಗಳು ತಟ್ಟೆಗಳ ಸಮೇತ ಸಾರ್ವಜನಿಕವಾಗಿ ಹರಾಜು ಹಾಕಿ ಮುಂದಿನ ವರ್ಷದ ಹಬ್ಬಕ್ಕೆ ಹಣ ಸಂಗ್ರಹಿಸುವುದು ಉತ್ತರ ಕರ್ನಾಟಕದಲ್ಲಿ ಸಾಮಾನ್ಯ.ವಸ್ತುಗಳಲ್ಲಿ ತೆಂಗಿನಕಾಯಿಗೆ ವಿಶೇಷ ಆದ್ಯತೆ.
ಒಂದೊಂದು ತೆಂಗಿನಕಾಯಿ ಹೆಚ್ಚು ಎಂದರೆ 5,000 ಸಾವಿರ ರೂಪಾಯಿಗೆ ಸವಾಲು ಆಗಿರುತ್ತೆ. ಆದರೆ, ಕಳೆದ ವರ್ಷ ಒಂದು ತೆಂಗಿನಕಾಯಿಯಲ್ಲಿ ದಾಖಲೆ ಮೊತ್ತ 2.05 ಲಕ್ಷ ರೂಪಾಯಿಗೆ ಲೀಲಾವಾಗಿತ್ತು. ಆದರೆ ಇದೇ ದಾಖಲೆಯನ್ನು ಭಕ್ತರು ಮುರಿದಿದ್ದಾರೆ.
ಮೂಡಲಗಿ ಪಟ್ಟಣದ ವಿಜಯ ನಗರದ ಶ್ರೀ ಗಜಾನನ ಯುವಕ ಮಂಡಳಿ ಈ ವರ್ಷದ 2.65 ಲಕ್ಷ ರೂಪಾಯಿಗೆ ಸವಾಲಿನಲ್ಲಿ ಮೊದಲನೇ ಕಾಯಿ ಸವಾಲು ಮಾಡುವ ಮೂಲಕ ದಾಖಲೆ ನಿರ್ಮಿಸಿದೆ.
ಅಷ್ಟು ಮೊತ್ತ ಕೊಟ್ಟು ತೆಂಗಿನಕಾಯಿ ಪಡೆದವರು ಮೂಡಲಗಿಯವರೇ ಆದ ರಾಮು ಬಾಪು ಪಾಟೀಲ. ಗಣೇಶನ ಮುಂದೆ ಇಡಲಾಗಿದ್ದ ಫಲಗಳ ಹರಾಜಿನ ಮೂಲಕ ಮಂಡಳಿ ಈ ವರ್ಷ ಒಟ್ಟು 6.76 ಲಕ್ಷ ರೂಪಾಯಿ ಸಂಗ್ರಹಿಸಿದೆ.
ಕಳೆದ ವರ್ಷವೂ ಮೊದಲನೇ ತೆಂಗಿನಕಲಾಯಿಯನ್ನು ರಾಮಾ ಪಾಟೀಲ ಅವರೇ 2.05 ಲಕ್ಷ ರೂಪಾಯಿಗೆ ಹರಾಜಿನಲ್ಲಿ ಪಡೆದಿದ್ದರು.
ಕಳೆದ ವರ್ಷದ ಹರಾಜಿನಿಂದ 5.53 ಲಕ್ಷ ರೂಪಾಯಿ ಸಂಗ್ರಹಿಸಲಾಗಿತ್ತು. 20 ವರ್ಷದಿಂದ ಇಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಲಾಗುತ್ತಿದೆ ಎಂದು ಗಣೇಶ ಮಂಡಳಿ ಪದಾಧಿಕಾರಿಗಳು ತಿಳಿಸಿದ್ದಾರೆ.
ಇನ್ನು 2ನೇ ಟೆಂಗಿನಕಾಯಿ 81 ಸಾವಿರ ರೂಪಾಯಿಗೆ ದಾದು ಮಾರುತಿ ಕೋಳಿಗುಡ್ಡ, 3ನೇ ತೆಂಗಿನಕಾಯಿ 31 ಸಾವಿರ ರೂಪಾಯಿಗೆ ಸಾಯಿರಾಜ ಅಂಕುಶ ಕೋಮಟೆ, 4ನೇ ತೆಂಗಿನಕಾಯಿ 25,101 ರೂಪಾಯಿಗೆ ಅಶೋಕ ಲಕ್ಷ್ಮಣ ಕೋಮಟೆ, 5ನೇ ತೆಂಗಿನಕಾಯಿ 77,777 ರೂಪಾಯಿಗೆ ಶ್ರೀಧರ ಬಾಬುರಾವ ಕೋಮಟೆ, ಕುಂಭದ ಮೇಲಿನ ತೆಂಗಿನಕಾಯಿ 51 ಸಾವಿರ ರೂಪಾಯಿಗೆ ಮುತ್ತಪ್ಪ ಬಾಪು ಪಾಟೀಲ ಸವಾಲು ಮೂಲಕ ಪಡೆದುಕೊಂಡಿದ್ದಾರೆ.