ಮುಂಬೈ : ಲಿವಾ ಮಿಸ್ ದಿವಾ ಯುನಿವರ್ಸ-2022 ಪ್ರಶಸ್ತಿಯನ್ನು ಈ ಬಾರಿ ಕರಾವಳಿ ಮೂಲದ ದಿವಿತಾ ರೈ ಗೆದ್ದುಕೊಂಡಿದ್ದಾರೆ. ಈ ಮೂಲಕ ದಿವಿತಾ, ಮಿಸ್ ಯೂನಿವರ್ಸ 2022ಕ್ಕೆ ಭಾರತವನ್ನು ಪ್ರತಿನಿಧಿಸಲು ಅರ್ಹರಾಗಿದ್ದಾರೆ.
ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ 2021ರ ಮಿಸ್ ಯೂನಿವರ್ಸ್ ಹರ್ನಾಝ ಸಂಧು ಅವರು 2022ರ ಲಿವಾ ಮಿಸ್ ದಿವಾ ಪ್ರಶಸ್ತಿ ಕಿರೀಟವನ್ನು ದಿವಿತಾ ರೈ ಅವರಿಗೆ ತೊಡಿಸಿದ್ದಾರೆ. ತೆಲಂಗಾಣದ ಪ್ರಗ್ಯಾ ಅಯ್ಯಗರಿ ಲಿವಾ ಮಿಸ್ ದಿವಾ ಸೂಪರ್ ನ್ಯಾಷನಲ್ ವಿಜೇತರಾಗಿದ್ದಾರೆ.
ಮಂಗಳೂರಿನಲ್ಲಿ ಜನಿಸಿದ ದಿವಿತಾ ರೈ ಅವರ ತಂದೆ ದಿಲೀಪ ರೈ ಹಾಗೂ ತಾಯಿ ಪವಿತ್ರಾ ರೈ. ತಂದೆ ಉದ್ಯೋಗದ ಕಾರಣದಿಂದಾಗಿ ದಿವಿತಾ ಬೇರೆ ಬೇರೆ ಸ್ಥಳಗಳಲ್ಲಿ ಬೆಳೆದಿದ್ದರು.
ಮುಂಬೈನಲ್ಲಿ ನೆಲೆಸಿರುವ ಅವರು ಜೆ.ಜೆ.ಕಾಲೇಜ ಆಫ್ ಆರ್ಕಿಟೆಕ್ಚರ್ ನಲ್ಲಿ ಪದವಿ ಪಡೆದಿದ್ದಾರೆ. ಇದರ ಜೊತೆಗೆ ಮಾಡೆಲ್ಲಿಂಗ್ ಸಹ ಮಾಡಿದ್ದಾರೆ.
ಲೀವಾ ಮಿಸ್ ದೀವಾ ಯೂನಿವರ್ಸ-2020 ರ ಪ್ರಶಸ್ತಿಯನ್ನು ಉಡುಪಿಯ ಉದ್ಯಾವರ ಕೊರಂಗ್ರಪಾಡಿ ನಿವಾಸಿ ಅಡ್ಲಿನ್ ಕ್ಯಾಸ್ಟಲಿನೊ ಪಡೆದುಕೊಂಡಿದ್ದರು.