ಬೆಳಗಾವಿ : ರಾಜ್ಯದ ಉತ್ತರ ಕರ್ನಾಟಕ ಪ್ರಮುಖ ದೇವಸ್ಥಾನಗಳು ಹಾಗೂ ರಾಜ್ಯದಿಂದ ಹೆಚ್ಚು ಭಕ್ತರನ್ನು ಹೊಂದಿರುವ ಕೊಲ್ಲಾಪುರದ ಸಿದ್ದಗಿರಿ ಮಠದ ವಿಶೇಷ ಅನುದಾನವನ್ನು ಮುಜರಾಯಿ ಇಲಾಖೆಯ ವತಿಯಿಂದ ಬಿಡುಗಡೆಗೊಳಿಸಲು ಅಧಿಕೃತ ಆದೇಶ ಹೊರಡಿಲಾಗಿದೆ ಎಂದು ಮಾನ್ಯ ಮಜರಾಯಿ, ಹಜ್ ಮತ್ತು ವಕ್ಫ ಖಾತೆ ಸಚಿವೆ ಶ್ರೀಮತಿ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು, 2021 ರ ಡಿಸೆಂಬರ್ ನಲ್ಲಿ ಬೆಳಗಾವಿಯ ಅಧಿವೇಶನದ ಸಂಧರ್ಭದಲ್ಲಿ ನಡೆದ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಯಲ್ಲಿ ತಗೆದುಕೊಂಡ ನಿರ್ಧಾರದಂತೆ ಈ ವಿಶೇಷ ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ.
ಪ್ರಮುಖ ದೇವಸ್ಥಾನಗಳಾದ ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ದೇವಸ್ಥಾನ, ಕಲಬುರ್ಗಿ ಜಿಲ್ಲೆಯ ಗಾಣಗಾಪುರದ ದತ್ತಾತ್ರೇಯಸ್ವಾಮಿ ದೇವಾಲಯ, ಉತ್ತರ ಕರ್ನಾಟಕ ಭಾಗದ ಅತಿಹೆಚ್ಚು ಭಕ್ತರನ್ನು ಹೊಂದಿರುವ ಕೊಲ್ಲಾಪುರದ ಸಿದ್ದಗಿರಿ ಮಠಕ್ಕೆ ಮತ್ತು ಹೂವಿನ ಹಡಗಲಿ ತಾಲ್ಲೂಕಿನ ಮೈಲಾರ ಲಿಂಗೇಶ್ವರ ಸ್ವಾಮಿ ದೇವಸ್ಥಾನಕ್ಕೆ ತಲಾ 3 ಕೋಟಿ ರೂಪಾಯಿಗಳನ್ನು ಬಿಡುಗಡೆಗೊಳಿಸಿದ್ದೇವೆ. ಈ ಅನುದಾನವನ್ನು ಬಳಸಿಕೊಂಡು ದೇವಸ್ಥಾನಗಳನ್ನು ಅಭಿವೃದ್ದಿಗೊಳಿಸಲು ಅಧಿಕಾರಿಗಳಿಗೆ ಹಾಗೂ ದೇವಸ್ಥಾನಗಳ ವ್ಯವಸ್ಥಾಪನ ಮಂಡಳಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.