4 ಪದವಿ ಪಡೆದು ಪಿಎಚ್ ಡಿ ಮಾಡಿದರೂ ತರಕಾರಿ ಮಾರುವ ವ್ಯಕ್ತಿ!

A B Dharwadkar
4 ಪದವಿ ಪಡೆದು ಪಿಎಚ್ ಡಿ ಮಾಡಿದರೂ ತರಕಾರಿ ಮಾರುವ ವ್ಯಕ್ತಿ!

ಚಂಡಿಗಡ, ೧:: ಆತ ಪಡೆದದ್ದು ನಾಲ್ಕು ಸ್ನಾತಕೋತ್ತರ ಮತ್ತು ಒಂದು ಪಿಎಚ್‌ಡಿ ಪದವಿ, ಆದರೂ ಜೀವನ ನಿರ್ವಹಣೆಗೆ ಆಯ್ದುಕೊಂಡದ್ದು ತರಕಾರಿ ಮಾರಾಟ. ಆ ಮೂಲಕ ಸ್ವಾಭಿಮಾನಿ ಬದುಕಿಗೆ ಆತ ಮಾದರಿಯಾಗಿದ್ದಾರೆ.

ಪಂಜಾಬ ರಾಜಧಾನಿ ಚಂಡಿಗಡದಲ್ಲಿ ತಮ್ಮ ಸೈಕಲ್ ಮೇಲೆ ತರಕಾರಿ ತೆಗೆದುಕೊಂಡು ಮಾರಾಟ ಮಾಡುವ ಇವರು ಸೈಕಲಿಗೆ “ಪಿಎಚ್ ಡಿ ಸಬ್ಜಿವಾಲಾ” ಎಂಬ ಬೋರ್ಡ ಹಾಕಿಕೊಂಡಿದ್ದಾರೆ.

39 ವರ್ಷದ ಡಾ. ಸಂದೀಪ ಸಿಂಗ್ ಅವರು ಪಂಜಾಬಿನ ಪಟಿಯಾಲಾದ ಪಂಜಾಬಿ ವಿಶ್ವವಿದ್ಯಾಲಯದಲ್ಲಿ ಗುತ್ತಿಗೆ ಪ್ರಾಧ್ಯಾಪಕರಾಗಿದ್ದರು. ಆದಾಗ್ಯೂ, ದುರದೃಷ್ಟಕರ ಸಂದರ್ಭಗಳು ಅವರು ಕೆಲಸವನ್ನು ತೊರೆಯುವಂತೆ ಮಾಡಿತು. ಅದು ನಂತರದಲ್ಲಿ ಅವರು ಹಣ ಸಂಪಾದನೆಗೆ ತರಕಾರಿಗಳನ್ನು ಮಾರಾಟ ಮಾಡಲು ಕಾರಣವಾಯಿತು.

ಡಾ. ಸಂದೀಪ ಸಿಂಗ್ ಅವರು 11 ವರ್ಷಗಳ ಕಾಲ ಪಂಜಾಬಿ ವಿಶ್ವವಿದ್ಯಾಲಯದ ಕಾನೂನು ವಿಭಾಗದಲ್ಲಿ ಗುತ್ತಿಗೆ ಪ್ರಾಧ್ಯಾಪಕರಾಗಿದ್ದರು. ಅವರು ಕಾನೂನಿನಲ್ಲಿ ಪಿಎಚ್‌ಡಿ ಮಾಡಿದ್ದಾರೆ ಮತ್ತು ಪಂಜಾಬಿ, ಪತ್ರಿಕೋದ್ಯಮ ಮತ್ತು ರಾಜಕೀಯ ಶಾಸ್ತ್ರ ಸೇರಿದಂತೆ ನಾಲ್ಕು ವಿಷಯಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ ಮತ್ತು ಇನ್ನೂ ಅಧ್ಯಯನವನ್ನು ಮುಂದುವರಿಸುತ್ತಿದ್ದಾರೆ.

ಸಂಬಳ ಕಡಿತ ಮತ್ತು ಅನಿಯಮಿತ ವೇತನ ಪಾವತಿಯಂತಹ ಅಡೆತಡೆಗಳನ್ನು ಎದುರಿಸಿದ ನಂತರ ಅವರು ತಮ್ಮ ಕೆಲಸವನ್ನು ತೊರೆಯಬೇಕಾಯಿತು. “ಸಮಯಕ್ಕೆ ಸರಿಯಾಗಿ ಸಂಬಳ ಸಿಗದ ಕಾರಣ ನಾನು ಕೆಲಸ ಬಿಡಬೇಕಾಯಿತು ಮತ್ತು ಆಗಾಗ ಸಂಬಳವೂ ಕಡಿತವಾಗುತ್ತಿತ್ತು. ಆ ಕೆಲಸದಿಂದ ಜೀವನ ನಡೆಸುವುದು ನನಗೆ ಕಷ್ಟವಾಯಿತು. ಅದಕ್ಕಾಗಿಯೇ ನಾನು ನನ್ನ ಕುಟುಂಬದ ನಿರ್ವಹಣೆಗಾಗಿ ತರಕಾರಿ ಮಾರಾಟಕ್ಕೆ ಬದಲಾಗಬೇಕಾಯಿತು ಎಂದು ಡಾ. ಸಂದೀಪ ಸಿಂಗ್‌ ಹೇಳುತ್ತಾರೆ.

“ಪಿಎಚ್‌ಡಿ ಸಬ್ಜಿವಾಲಾ” ಎಂಬ ಬೋರ್ಡ‌ನೊಂದಿಗೆ ಡಾ. ಸಂದೀಪ ಸಿಂಗ್ ಅವರು ಪ್ರತಿದಿನ ತರಕಾರಿ ಮಾರಲು ಮನೆ ಮನೆಗೆ ಹೋಗುತ್ತಾರೆ. ಪ್ರೊಫೆಸರ್ ಆಗಿದ್ದಕ್ಕಿಂತ ತರಕಾರಿ ಮಾರಾಟ ಮಾಡಿ ಹೆಚ್ಚು ಹಣ ಗಳಿಸುತ್ತೇನೆ ಎನ್ನುತ್ತಾರೆ. ಪೂರ್ಣ ದಿನ ತರಕಾರಿ ಮಾರಿದ ನಂತರ, ಅವರು ಮನೆಗೆ ಹಿಂದಿರುಗುತ್ತಾರೆ ಮತ್ತು ತನ್ನ ಮುಂದಿನ ಪರೀಕ್ಷೆಗಾಗಿ ಓದುತ್ತಾರೆ.

ಅಧ್ಯಾಪನಕ್ಕೆ ಬ್ರೇಕ್ ಹಾಕಿದ್ದರೂ ಡಾ.ಸಂದೀಪ ಸಿಂಗ್ ತಮ್ಮ ಉತ್ಸಾಹವನ್ನು ಬಿಟ್ಟಿಲ್ಲ. ಹಣ ಉಳಿಸಿ ಮುಂದೊಂದು ದಿನ ಸ್ವಂತ ಟ್ಯೂಷನ್ ಸೆಂಟರ್ ತೆರೆಯುವ ಹಂಬಲ ಅವರದ್ದಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.