ಬೀದರ್ : ಟ್ರಕ್ ಮತ್ತು ಆಟೋ ನಡುವೆ ಡಿಕ್ಕಿಯಾಗಿ ಏಳು ಮಂದಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಚಿಟಗುಪ್ಪ ತಾಲೂಕಿನ ಬೆಮ್ಮಳಖೇಡ ಬಳಿ ನಡೆದಿದೆ.
ಟ್ರಕ್ ಮತ್ತು ಆಟೋದ ನಡುವೆ ಸಂಭವಿಸಿದ ಅಪಘಾತದಲ್ಲಿ ಐವರು ಕೂಲಿ ಕಾರ್ಮಿಕ ಮಹಿಳೆಯರು ಸೇರಿ ಏಳು ಮಂದಿ ಸಾವನ್ನಪ್ಪಿದ್ದಾರೆ.
ಮೃತರನ್ನು ಪ್ರಭಾವತಿ(36), ಜಕ್ಕಮ್ಮ(32), ರುಕ್ಮಿಣಿ (60), ಯಾದಮ್ಮ(40), ಗುಂಡಮ್ಮ(52) ಎಂದು ಗುರುತಿಸಲಾಗಿದ್ದು, ಇನ್ನಿಬ್ಬರು ಹೆಸರು ಪತ್ತೆಯಾಗಿಲ್ಲ. ಇದೇ ಅಪಘಾತದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ
ಈ ಅಪಘಾತದಲ್ಲಿ ಮೃತಪಟ್ಟಿರುವ ಚಿಟಗುಪ್ಪ ತಾಲೂಕಿನ ಉಡುಮನಳ್ಳಿ ಮೂಲದವರು ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಮಾಹಿತಿ ನೀಡಿದ್ದಾರೆ.
ಅಪಘಾತದಲ್ಲಿ ಮೃತಪಟ್ಟವರೆಲ್ಲ ಕೂಲಿ ಕಾರ್ಮಿಕರೇ ಆಗಿದ್ದಾರೆ. ದಿನನಿತ್ಯದ ಕೂಲಿ ಕೆಲಸವನ್ನು ಮುಗಿಸಿಕೊಂಡು ಆಟೋದಲ್ಲಿ ಸ್ವಗ್ರಾಮಕ್ಕೆ ವಾಪಸ್ ಆಗುತ್ತಿದ್ದರು. ಈ ಸಂದರ್ಭದಲ್ಲಿ ಬೆಮ್ಮಳಖೇಡ ಬಳಿ ಟ್ರಕ್ ಆಟೋಗೆ ಬಂದು ಡಿಕ್ಕಿ ಹೊಡೆದಿದೆ.