ಲಖನೌ :ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲೆ ದುಷ್ಕರ್ಮ ನಡೆದ ಬಗ್ಗೆ ದಿನನಿತ್ಯ ವರದಿಗಳು ಬರುತ್ತಿದ್ದು ಅಂಥದ್ದೇ ಮತ್ತೊಂದು ಹೀನಕೃತ್ಯ ವರದಿಯಾಗಿದೆ. ಮೊರಾದಾಬಾದ್ನಲ್ಲಿ ಜಾತ್ರೆಗೆ ತೆರಳಿದ್ದ 15 ವರ್ಷದ ಬಾಲಕಿಯನ್ನು ಅಪಹರಿಸಿ ಆಕೆಯ ಮೇಲೆ ಐವರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.
ಇದರಿಂದ ಆಘಾತಗೊಂಡ ರಕ್ತಸ್ರಾವವಾಗುತ್ತಿದ್ದ ಆಕೆ ತನ್ನ ಪ್ರಾಣ ಉಳಿಸಿಕೊಳ್ಳಲು ರಸ್ತೆಯಲ್ಲಿ ನಗ್ನವಾಗಿಯೇ ಓಡಿಕೊಂಡು ಹೋಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಬಾಲಕಿಯ ಬಟ್ಟೆಯನ್ನು ಕಸಿದುಕೊಂಡ ಕಾಮುಕರು ಆಕೆಯನ್ನು ಬೆತ್ತಲೆಯಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುವಂತೆ ಮಾಡಿದ್ದಾರೆ.
ಆ ರಸ್ತೆಯಲ್ಲಿ ರಾತ್ರಿ ವೇಳೆ ಆ ಬಾಲಕಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್ ಸವಾರರು, ಕಾರು ಚಾಲಕರು ತಮ್ಮ ವಾಹನವನ್ನು ನಿಲ್ಲಿಸಿ ಆಕೆಯನ್ನೇ ನೋಡುತ್ತಿರುವ ವಿಡಿಯೋವೊಂದು ಎಲ್ಲೆಡೆ ಹರಿದಾಡುತ್ತಿದೆ.
ಈ ಘಟನೆ ನಡೆದ 15 ದಿನಗಳ ನಂತರ ಈ ವಿಡಿಯೋ ಬಹಿರಂಗವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆತಂಕ ಸೃಷ್ಟಿಸಿದೆ. 30 ಸೆಕೆಂಡುಗಳ ಈ ವಿಡಿಯೋದಲ್ಲಿ ಸಾಕಷ್ಟು ರಕ್ತಸ್ರಾವವಾಗುತ್ತಿದ್ದಾಗ ಆ ಬಾಲಕಿ ನಗ್ನ ಸ್ಥಿತಿಯಲ್ಲಿಯೇ ರಸ್ತೆಯಲ್ಲಿ ನಡೆದುಕೊಂಡು ಸುಮಾರು 2 ಕಿಲೋ ಮೀಟರ್ ದೂರದಲ್ಲಿರುವ ತನ್ನ ಮನೆಗೆ ತಲುಪಿದ್ದಾಳೆ. 15 ವರ್ಷದ ಬಾಲಕಿ ಅತ್ಯಾಚಾರದ ನಂತರ ಸಂಪೂರ್ಣ ಆಘಾತಕ್ಕೊಳಗಾಗಿದ್ದಳು.
ಕಾಮುಕರು ಆಕೆಯ ಮೈಮೇಲೆ ಸಣ್ಣ ತುಂಡು ಬಟ್ಟೆಯನ್ನೂ ಬಿಟ್ಟಿರಲಿಲ್ಲ. ಆಕೆಯನ್ನು ನಗ್ನ ಸ್ಥಿತಿಯಲ್ಲಿ ಕಾರಿನಿಂದ ಹೊರಗೆ ಎಸೆಯಲಾಯಿತು. ಅಲ್ಲಿಂದ ಆಕೆ ನಡೆದುಕೊಂಡು, ಓಡಿಕೊಂಡು ಮನೆ ತಲುಪಿದ್ದಾಳೆ.
#Moradabad, #UP से एक सनसनीखेज़ वीडियो सामने आया है। बताया जा रहा की 5 लोगों ने एक लड़की का #Gangrape कर उसे सड़क पर निवस्त्र छोड़ दिया।लड़की उसी अवस्था में अपने घर तक पैदल चल कर गयी। वीडियो की अभी पुष्टि होनी बांकी है।पुलिस जांच में जुटी है।1 मुल्ज़िम को गिरफ्तार कर लिया गया है। pic.twitter.com/OWNoclZ1JV
— Aman Dwivedi (@amandwivedi48) September 22, 2022
ಅಲ್ಲದೇ ಕೆಲವರು ಆಕೆ ನಗ್ನವಾಗಿ ನಡೆದುಕೊಂಡು ಹೋಗುತ್ತಿರುವುದನ್ನು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಆದರೆ, ಇದ್ಯಾವುದರ ಪರಿವೆಯೂ ಇಲ್ಲದ ಆ ಬಾಲಕಿ ಆಘಾತದಿಂದ ತನ್ನಷ್ಟಕ್ಕೆ ತಾನು ಮೈಮೇಲೆ ಪ್ರಜ್ಞೆ ಇಲ್ಲದಂತೆ ನಡೆದುಕೊಂಡು ಹೋಗುತ್ತಲೇ ಇದ್ದಳು.
ಆ ಬಾಲಕಿಯ ಮನೆಯವರು ನೀಡಿದ ದೂರಿನ ಆಧಾರದಲ್ಲಿ ಸೆಪ್ಟೆಂಬರ್ 7ರಂದು ಎಫ್ಐಆರ್ ದಾಖಲಿಸಿದ ನಂತರ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಗಳು ಬಾಲಕಿ ಹಾಗೂ ಆಕೆಯ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರುದಾರರು ತಿಳಿಸಿದ್ದಾರೆ.