ತಿರುವನಂತಪುರ: ಎರಡು ವರ್ಷದ ಬಾಲಕ ಟಿ.ವಿಯ ರಿಮೋಟ್ ಕಂಟ್ರೋಲರ್ನ ಬ್ಯಾಟರಿ ನುಂಗಿದ ಘಟನೆ ಕೇರಳದಲ್ನಲಿಡೆದಿದೆ. ತಕ್ಷಣ ಇದು ಗೊತ್ತಾದ ಕಾರಣ ಶಸ್ತ್ರಚಿಕಿತ್ಸೆಯ ಮೂಲಕ ವೈದ್ಯರು ಬ್ಯಾಟರಿ ಹೊರಕ್ಕೆ ತೆಗೆದಿದ್ದಾರೆ.
ನಿಮ್ಸ ಆಸ್ಪತ್ರೆಯ ಗ್ಯಾಸ್ಟ್ರೋ ಎಂಟರಾಲಜಿಸ್ಟ್ ಜಯಕುಮಾರ್ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ನೆರವೇರಿಸಲಾಯಿತು. ಬಾಲಕ ರಿಷಿಕೇಷ್ನ ಜೀವಕ್ಕೆ ಅಪಾಯ ಆಗುವುದು ಇದರಿಂದ ತಪ್ಪಿದೆ.
ಟಿವಿ ರಿಮೋಟ್ನಲ್ಲಿ ಬಳಸಲಾಗಿದ್ದ ಐದು ಸೆಂಟಿಮೀಟರ್ ಉದ್ದ ಮತ್ತು ಒಂದೂವರೆ ಸೆಂಟಿಮೀಟರ್ ಅಗಲದ ಬ್ಯಾಟರಿಯನ್ನು ಮಗು ಆಟವಾಡುತ್ತಾ ನುಂಗಿತ್ತು.