ಪುಣೆ : ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದು ಶುಭಾಶಯ ಕೋರಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪುಣೆಯಲ್ಲಿ ನಡೆದಿದೆ.
ರೈತ ದಶರಥ ಎಲ್ ಕೇದಾರಿ, ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದು ಶುಭಾಶಯ ಕೋರಿ ನಂತರ ಬಾವಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾನೆ.
ಕೇದಾರಿ ಕಳೆದ 8 ವರ್ಷಗಳಿಂದ ಬಣಕರಫಾಟ ಗ್ರಾಮದಲ್ಲಿ ರೈತನಾಗಿ ಕೆಲಸ ಮಾಡುತ್ತಿದ್ದನು. ಕೇದಾರಿ ಅವರು ತಮ್ಮ ಆತ್ಮಹತ್ಯೆ ಪತ್ರದಲ್ಲಿ ಪ್ರಧಾನಿ, ನಿಮಗೆ ಜನ್ಮದಿನದ ಶುಭಾಶಯಗಳು ಮತ್ತು ಕನಿಷ್ಠ ಬೆಂಬಲ ಬೆಲೆಯನ್ನು ಖಾತ್ರಿಪಡಿಸುವಲ್ಲಿ ವಿಫಲವಾದ ಕಾರಣ ಸಾಲಗಾರರಿಂದ ಕಿರುಕುಳ ತಾಳಲಾರದೇ ತನ್ನ ಜೀವನವನ್ನು ಕೊನೆಗೊಳಿಸಬೇಕಾಯಿತು ಎಂದು ಹೇಳಿದ್ದಾನೆ.
ಇತ್ತೀಚಿನ ಪ್ರವಾಹ ಮತ್ತು ಸಾಂಕ್ರಾಮಿಕ ರೋಗದಿಂದ ಹಾನಿಗೊಳಗಾದ ಬೆಳೆಗಾರರಿಗೆ ರಾಜ್ಯವು ಎಂಎಸ್ಪಿ ನೀಡುತ್ತಿಲ್ಲ ಎಂಬುದನ್ನು ಅವನು ವಿವರಿಸಿದ್ದಾನೆ.
ರೈತ ಕೇದಾರಿ ಈರುಳ್ಳಿ ಬೆಳೆದಿದ್ದ. ಆದರೆ ಬೆಳೆಗೆ ಸರಿಯಾದ ಬೆಲೆ ಸಿಗದ ಕಾರಣ 1.5 ಲಕ್ಷದಿಂದ 2 ಲಕ್ಷ ಮೌಲ್ಯದ ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಿಟ್ಟಿದ್ದರು. ಈ ಬಾರಿ ಉತ್ತಮ ಬೆಲೆ ಸಿಗಬಹುದು ಎಂದು ನಿರೀಕ್ಷಿಸಿದ್ದರು ಆದರೆ ಸಿಕ್ಕಿರಲಿಲ್ಲ. ನಾವೇನು ಮಾಡಬೇಕು.
“ಮೋದಿ ಸಾಹೇಬ್ರೇ ನಿಮಗೆ ನಿಮ್ಮ ಬಗ್ಗೆ ಮಾತ್ರ ಕಾಳಜಿ ಇದೆ, ನಾವು ಭಿಕ್ಷೆ ಬೇಡುತ್ತಿಲ್ಲ, ಆದರೆ ನಮಗೆ ಸಲ್ಲಬೇಕಾದದ್ದು ಏನು. ಲೇವಾದೇವಿಗಾರರು ನಮಗೆ ಬೆದರಿಕೆ ಹಾಕುತ್ತಿರುವ ಕಾರಣ ನಮಗೆ ಎಂಎಸ್ಪಿ ನೀಡಬೇಕು. ರೈತರು, ತಮ್ಮ ಕುಂದುಕೊರತೆಗಳನ್ನು ತಗೆದುಕೊಂಡು ನಾವು ಎಲ್ಲಿಗೆ ಹೋಗಬೇಕು” ಎಂದು ಪತ್ರದಲ್ಲಿ ಕೇದಾರಿ ಹೇಳಿದ್ದಾನೆ.
ಶಿವಸೇನೆಯ ವಕ್ತಾರರಾದ ಕಿಶೋರ ತಿವಾರಿ ಮತ್ತು ಡಾ. ಮನೀಶಾ ಕಯಾಂಡೆ ಅವರು ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದ ಕೃಷಿ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ವಿಫಲವಾಗಿದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಂಡಿದ್ದಾನೆ.
42ರ ಹರೆಯದ ಕೇದಾರಿ ಅವರು ತಮ್ಮ ಪತ್ನಿ ಶಾಂತಾ ಮತ್ತು ಕಾಲೇಜಿಗೆ ಹೋಗುವ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. 20 ವರ್ಷದ ಮಗ ಶುಭಂ , ಮತ್ತು 18ವರ್ಷದ ಮಗಳು ಶ್ರಾವಣಿ , ಅವರ ಸೋದರ ಮಾವ ಹಾಗೂ ಕುಟುಂಬದವರು ಅಲೆಫಾಟಾ ಪೊಲೀಸ್ ಠಾಣೆಗೆ ಭೇಟಿ ಪ್ರಕರಣ ದಾಖಲಿಸಿದ್ದಾರೆ.
ಮರಾಠಿಯಲ್ಲಿ ಬರೆದ ಸುಸೈಡ ನೋಟ್ ಸಹಿ ಹಾಕಿದ ನಂತರ, ಕೇದಾರಿ ಪತ್ರದ ಕೆಳಭಾಗದಲ್ಲಿ ಪ್ರಧಾನಿ ಮೋದಿ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ.