ಹೊಸದಿಲ್ಲಿ: ಅಂತರ್ಧರ್ಮೀಯ ವಿವಾಹದ ಧಾರ್ಮಿಕ ಮತಾಂತರವನ್ನು ನಿಯಂತ್ರಿಸುವ ರಾಜ್ಯ ಸರ್ಕಾರಗಳ ಕಾನೂನುಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಮ ಕೋರ್ಟ ಜನವರಿ 2 ರಂದು ವಿಚಾರಣೆಗೆ ಒಳಪಡಿಸಲಿದ್ದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಮತ್ತು ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಅವರ ಪೀಠವು ನ್ಯಾಯಾಲಯಗಳ ಪುನರಾರಂಭದ ಪ್ರಕರಣದ ವಿಚಾರಣೆ ನಡೆಸಲಿದೆ.
ಕೆಲವು ರಾಜ್ಯ ಸರ್ಕಾರಗಳು ಜಾರಿಗೊಳಿಸಿದ ಮತಾಂತರ ವಿರೋಧಿ ಕಾನೂನುಗಳನ್ನು ಪ್ರಶ್ನಿಸಿ ಹಲವಾರು ಸಾರ್ವಜನಿಕ ಹಿತಾಸಕ್ತಿ ದಾವೆಗಳನ್ನು(ಪಿಐಎಲ್) ಸಲ್ಲಿಸಲಾಗಿದ್ದು ಕೆಲವು ಅರ್ಜಿಗಳನ್ನು ವಕೀಲರಾದ ವಿಶಾಲ ಠಾಕ್ರೆ, ಎ.ಎಸ್. ಯಾದವ, ಸಂಶೋಧಕ ಪ್ರಣ್ವೇಶ ಮತ್ತು ‘ನ್ಯಾಯ ಮತ್ತು ಶಾಂತಿಗಾಗಿ ನಾಗರಿಕರು’ ಎನ್ಜಿಒ ಸಲ್ಲಿಸಿದ್ದಾರೆ.
ಜನವರಿ 6, 2021 ರಂದು ಸುಪ್ರೀಮ ಕೋರ್ಟ, ರಾಜ್ಯ ಸರ್ಕಾರಗಳು ಜಾರಿಗೊಳಿಸಿದ ಕಾನೂನುಗಳ ಸಾಂವಿಧಾನಿಕ ಸಿಂಧುತ್ವವನ್ನು ಪರಿಶೀಲಿಸಲು ಒಪ್ಪಿಕೊಂಡಿತು.
ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸರ್ಕಾರಗಳು ವಿವಾಹದ ಮೂಲಕ ಧಾರ್ಮಿಕ ಮತಾಂತರವನ್ನು ಅಪರಾಧೀಕರಿಸುವುದು ಮತ್ತು ಇನ್ನೊಂದು ಧರ್ಮದವರೊಂದಿಗೆ ಮದುವೆಯಾಗುವ ಮೊದಲು ಅಧಿಕೃತ ಅನುಮತಿಯನ್ನು ಕಡ್ಡಾಯಗೊಳಿಸುವುದನ್ನು ಜಾರಿ ಮಾಡಿವೆ.