ಬೆಂಗಳೂರು: ಪಠ್ಯದಲ್ಲಿ ನೀತಿ ಶಿಕ್ಷಣ ಅಳವಡಿಸುವ ಕುರಿತಾಗಿ ಸಲಹೆ ಪಡೆದುಕೊಳ್ಳಲು ಎಲ್ಲಾ ಧರ್ಮ ಗುರುಗಳು, ಎಲ್ಲಾ ಧರ್ಮಗಳ ನಾಯಕರ ಸಭೆಯನ್ನು ಶೀಘ್ರವೇ ಕರೆಯಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಬಿ.ಸಿ. ನಾಗೇಶ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಪಠ್ಯದಲ್ಲಿ ನೀತಿ ಶಿಕ್ಷಣ ಅಳವಡಿಸುವ ಬಗ್ಗೆ ಶೀಘ್ರದಲ್ಲೇ ಧರ್ಮಗುರುಗಳ ಸಭೆ ನಡೆಸಲಾಗುತ್ತದೆ. ಎಲ್ಲಾ ಧರ್ಮ ಗುರುಗಳನ್ನು ಸಭೆಗೆ ಆಹ್ವಾನಿಸಿ ಅಭಿಪ್ರಾಯ ಸಲಹೆ ವ್ಯಕ್ತಪಡಿಸಲು ಮುಕ್ತ ಅವಕಾಶ ನೀಡಲಿದ್ದು, ಧರ್ಮ ಗುರುಗಳು ನೀಡುವ ಒಳ್ಳೆಯ ಸಲಹೆಗಳು, ಅಂಶಗಳ ಸ್ವೀಕರಿಸಲಾಗುವುದು. ನಂತರ ಅವುಗಳನ್ನು ಸಾರ್ವಜನಿಕರ ಅಭಿಪ್ರಾಯಕ್ಕೆ ಬಿಡುಗಡೆ ಮಾಡಲಾಗುವುದು. ನಂತರ ಪಠ್ಯದಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದು ಹೇಳಲಾಗಿದೆ.