ವಿಜಯಪುರ : ಚಲಿಸುತ್ತಿದ್ದ ಲಾರಿಯ ಟೈಯರ್ ಸ್ಫೋಟ ಆಗಿ ಎದುರಿನಿಂದ ಬರುತ್ತಿದ್ದ ಮತ್ತೊಂದು ಲಾರಿಗೆ ಡಿಕ್ಕಿಯಾಗಿ ಓರ್ವ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ ದುರ್ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾರಜೋಳ ಕ್ರಾಸ್ ಬಳಿ ಶುಕ್ರವಾರ ನಡೆದಿದೆ.
ರಾಜಸ್ಥಾನ ಮೂಲದ ಪ್ರಭುಲಾಲ ಗುಜ್ಜಲ ಎಂಬವ ಮೃತಪಟ್ಟಿರುವ ದುರ್ದೈವಿ. ಅಲ್ಲದೇ, ಮತ್ತೋರ್ವ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬಬಲೇಶ್ವರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದು ಕೇಸ್ ದಾಖಲಾಗಿದೆ.