ಬೆಳಗಾವಿ : ಕೆಲ ದಿನಗಳಿಂದ ಸುರಿಯುತ್ತಿರುವ ಮಳೆ ಕಾರಣ ಬೆಳಗಾವಿಯ ಗಡಿಯಲ್ಲಿರುವ ಮಹಾರಾಷ್ಟ್ರದ ಸಾವಂತವಾಡಿ ರಸ್ತೆಯಲ್ಲಿ ಇರುವ ಅಂಬೋಲಿ ಫಾಲ್ಸ ಬಳಿ ದೊಡ್ಡ ಬಂಡೆ ಕಲ್ಲು ಉರುಳಿ ಬಿದ್ದು ರಸ್ತೆ ಸಂಚಾರಕ್ಕೆ ಅಡಚಣಿ ಉಂಟಾಗಿತ್ತು.
ಬೆಳಗಾವಿ- ಸಾವಂತವಾಡಿ ರಸ್ತೆಯಲ್ಲಿರುವ ಪ್ರಸಿದ್ದ ಅಂಬೋಲಿ ಫಾಲ್ಸ ಬರುತ್ತದೆ. ಈ ಫಾಲ್ಸ ನೋಡಲು ಬೆಳಗಾವಿ, ಗೋವಾ ಮತ್ತು ಮಹಾರಾಷ್ಟ್ರದಿಂದ ಸಾವಿರಾರು ಜನ ಬರುತ್ತಿದ್ದು ಆದರೆ ಏಕಾಏಕಿ ದೊಡ್ಡ ಗಾತ್ರದ ಬಂಡೆ ಕಲ್ಲು ಫಾಲ್ಸ ಬಳಿ ರಸ್ತೆಯ ಮೇಲೆ ಉರುಳಿ ಬಿದ್ದಿತು.
ಇದರಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಜೆಸಿಬಿ ಸಹಾಯದಿಂದ ಮಹಾರಾಷ್ಟ್ರ ಲೋಕೋಪಯೋಗಿ ಇಲಾಖೆಯ ಸಿಬ್ಬಂದಿ ಮತ್ತು ಕಾರ್ಮಿಕರು ಸೇರಿ ಬಂಡೆ ಕಲ್ಲನ್ನು ಪಕ್ಕಕ್ಕೆ ಸರಿಸಿ ರಸ್ತೆ ಸಂಚಾರ ಸುಗಮಗೊಳಿಸಿದ್ದಾರೆ.
ಬಂಡೆಕಲ್ಲು ಉರುಳುವುದು ಇತ್ತೀಚೆಗೆ ಹೆಚ್ಚಾಗಿದ್ದು ಅಲ್ಲಿಗೆ ಹೋಗುವ ಪ್ರವಾಸಿಗರು ಮುನ್ನೆಚ್ಚರಿಕೆ ವಹಿಸುವದು ಅಗತ್ಯವಾಗಿದೆ.